Advertisement

DMK ವಿರುದ್ಧ1 ರೂ.ಮಾನನಷ್ಟ ಮೊಕದ್ದಮೆ!: ಅಣ್ಣಾಮಲೈ

06:19 PM Apr 17, 2023 | Team Udayavani |

ಕಾಪು : ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವಿನ ಮಾನನಷ್ಟ ಮೊಕದ್ದಮೆ ಜಟಾಪಟಿ ತಾರಕಕ್ಕೇರಿದ್ದು, ಈ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಕಾಪುನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ನಾವು ಗಂಭೀರವಾಗಿ ರಾಜಕೀಯ ಮಾಡುತ್ತಿದ್ದೇವೆ. ಡಿಎಂಕೆ ಮೇಲೆ ಒಂದು ರೂ., ಮಾನ ನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದರು.

Advertisement

ಡಿಎಂಕೆ ಅವರು ಇಲ್ಲಿಯವರೆಗೆ ನನ್ನ ಮೇಲೆ 1300 ಕೋ. ರೂ. ಮಾನ ನಷ್ಟ ಮೊಕದ್ದಮೆ ಹಾಕಿದ್ದಾರೆ. ಡಿಎಂಕೆ ಅವರು 500, 300 ಕೋ. ರೂ. ಒಂದೊಂದು ಬಾರಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಡಿಎಂಕೆ ಬಳಿ ಬಹಳ ಹಣ ಇರುವುದರಿಂದ ಇಷ್ಟು ನೂರಾರು ಕೋ. ರೂ. ನಷ್ಟು ಮಾನ ನಷ್ಟ ಮೊಕದ್ದಮೆ ಹಾಕುತ್ತಿದ್ದಾಾರೆ. ನಮ್ಮ ಡಿಎಂಕೆ ಫೈಲ್ಸ್ ವರದಿಯಲ್ಲಿ 11 ಮಂದಿ ನಾಯಕರು ಒಂದು ಲಕ್ಷ 31 ಸಾವಿರ ಕೋಟಿ ರೂ. ನಷ್ಟು ಪ್ರಾಪರ್ಟಿ ಮಾಡಿದ್ದಾಾರೆ. ಈ ಬಗ್ಗೆೆ ನಾವು ದಾಖಲೆ ಬಿಡುಗಡೆ ಮಾಡಿದ್ದೇವೆ ಇದು ಮೊದಲ ಹಂತದಲ್ಲಿ ನಾವು ಬಿಡುಗಡೆ ಮಾಡಿದ ದಾಖಲೆ. ಒಬ್ಬ ಡಿಎಂಕೆ ನಾಯಕನ ಬಳಿ 50 ಸಾವಿರ ಕೋ. ರೂ. ಇದೆ ಎಂದು ಆರೋಪಿಸಿದರು.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಮನಸ್ಸಿಗೆ ಸಂಕಟ
ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖರಾಗಿದ್ದವರು. ಪಕ್ಷವನ್ನು ಬೆಳೆಸುವುದರ ಜತೆಗೆ ಸಾಕಷ್ಟು ಅವಕಾಶವನ್ನು ಪಡೆದಿದ್ದರು. ಅವರು ಕಾಂಗ್ರೆಸ್ ಸೇರಿದ್ದು ನೋಡಿ ಮನಸ್ಸಿಗೆ ಸಂಕಟವಾಯಿತು. ಅವರದು ದುಡುಕಿನ ನಿರ್ಧಾರವಗಿದ್ದು, ಶೆಟ್ಟರ್ ಮತ್ತು ಲಕ್ಷಣ ಸವದಿ ಅವರು ವ್ಯಕ್ತಿಗತವಾಗಿ ಪಕ್ಷ ಬಿಟ್ಟಿದ್ದಾರೆ. ಇವರ ಈ ನಿರ್ಧಾರದಿಂದ ಪಕ್ಷದ ಮೇಲೆ ಪರಿಣಾಮ ಆಗಲ್ಲ ನರೇಂದ್ರ ಮೋದಿ ವಿಶ್ವ ನಾಯಕ ಎಂದು ಜಗದೀಶ್ ಶೆಟ್ಟರ್ ಹೇಳಿದ್ದು, ಅದೇ ಬಾಯಿಯಲ್ಲಿ ಯಾವ ರೀತಿ ಸೋನಿಯಾ ಗಾಂಧಿಯನ್ನು ಸಮರ್ಥಿಸುತ್ತಾರೋ ಗೊತ್ತಿಲ್ಲ ಎಂದು ಅಣ್ಣಾಮಲೈ ಹೇಳಿದರು.

ಹೆಲಿಕಾಪ್ಟರ್‌ನಲ್ಲಿ ಹಣ: ಸೊರಕೆ ಆರೋಪಕ್ಕೆ ಅಣ್ಣಾಮಲೈ ತಿರುಗೇಟು
ಹೆಲಿಕಾಪ್ಟರ್‌ನಲ್ಲಿ ಹಣ ತೆಗೆದುಕೊಂಡು ಬಂದಿದ್ದಾಾರೆ ಎಂದು ಸೊರಕೆ ನೀಡಿದ ಹೇಳಿಕೆಗೆ ಅಣ್ಣಾಮಲೈ ತಿರುಗೇಟು ನೀಡಿದರು.

ಸೊರಕೆ ಅವರು ಎಲ್ಲರೂ ಅವರ ರೀತಿ ಎಂದುಕೊಂಡಿದ್ದಾಾರೆ. ನಾವು ಪ್ರಾಮಾಣಿಕವಾಗಿ ಇದ್ದೇವೆ. ಅಪಪ್ರಚಾರ ಮಾಡುವ ಕಾಂಗ್ರೆಸ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರತಿಸ್ಪರ್ಧಿಗೆ ಹೆದರಿ ಸೊರಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಾನು ಹೆಲಿಕಾಪ್ಟರ್‌ನಲ್ಲಿ ಬಂದಿರೋದು ನಿಜ.

Advertisement

ಉಡುಪಿಯಿಂದ ಬೇರೆಬೇರೆ ಕಡೆಗಳಲ್ಲಿ ಐದು ಕಾರ್ಯಕ್ರಮಗಳು ನಿಗದಿಯಾಗಿದೆ. ಸುಳ್ಯ, ತೀರ್ಥಹಳ್ಳಿ, ಚಿಕ್ಕಮಗಳೂರು ಎಲ್ಲ ಕಡೆಗಳಲ್ಲಿ ಓಡಾಟ ಇದೆ. ಸರಿಯಾದ ಸಮಯಪಾಲನೆ ಮಾಡುವ ಅನಿವಾರ್ಯತೆಯಿಂದ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ. ಸೊರಕೆ ಅವರು ನನ್ನ ಒಳ್ಳೆ ಮಿತ್ರರು, ಅಸಹಾಯಕತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next