Advertisement

ಪ್ರತಿ ಲೀಟರ್ ಹಾಲಿಗೆ 1 ರೂ. ಹೆಚ್ಚಳ

01:08 PM Sep 21, 2019 | Team Udayavani |

ಕನಕಪುರ: ಹಾಲು ಉತ್ಪಾದಕರಿಗಾಗಿ ಪ್ರತಿ ಲೀಟರ್‌ ಹಾಲಿಗೆ 1 ರೂ. ಹೆಚ್ಚಳ ಮಾಡ ಲಾಗಿದೆ ಎಂದು ಬಮೂಲ್‌ ನಿರ್ದೇಶಕ ಹರೀಶ್‌ ಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಹೆಬ್ಬಿದರಮೆಟ್ಟಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಲೀಟರ್‌ ಹಾಲಿಗೆ 25 ರೂ. ನೀಡುತ್ತಿದೆ. ಲೀಟರ್‌ಗೆ 1 ರೂ. ಹೆಚ್ಚುವರಿ ನೀಡಲಾಗುತ್ತದೆ. ರೈತರು ಆರ್ಥಿಕ ಅಭಿವೃದ್ಧಿಗೆ ಒಕ್ಕೂಟ ಎಲ್ಲಾ  ರೀತಿಯ ಪ್ರೋತ್ಸಾಹವನ್ನು ನೀಡುತ್ತದೆ. ಅಕಾಲಿಕ ಮರಣ ಹೊಂದಿದ ರೈತ ಕುಟುಂಬಕ್ಕೆ ಒಕ್ಕೂಟದಿಂದ 1 ಲಕ್ಷ ರೂ. ಸಹಾಯಧನ ನೀಡಲಾಗುವುದು. ಹಾಲು ಉತ್ಪಾದಕರ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಡೇರಿಗೆ ಲಾಭ: ಡೇರಿ ಸಿಇಒ ಎಚ್‌.ಇ. ಪ್ರಕಾಶ್‌ ಮಾತನಾಡಿ, ನಮ್ಮ ಡೇರಿಗೆ 13,09,914 ರೂ. ಲಾಭ ಬಂದಿದೆ. ನಿತ್ಯ 1500 ಲೀಟರ್‌ ಹಾಲು ಉತ್ಪಾದನೆಯಾಗುತ್ತದೆ. ನಿವ್ವಳ ಲಾಭ 6,37,831 ರೂ. ಬಂದಿದ್ದು, ಹಾಲು ಉತ್ಪಾದಕರಿಗೆ ಬೋನಸ್‌ ರೂಪದಲ್ಲಿ 3,03,885 ರೂ. ನೀಡಲಾಗುವುದು. ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗಿದೆ. ಇದನ್ನು ಮುಂದುವರಿಸ ಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಡೇರಿ ಅಧ್ಯಕ್ಷ ಮಾದೇಗೌಡ, ಉಪಾಧ್ಯಕ್ಷ ಶ್ರೀನಿವಾಸ್‌, ನಿರ್ದೇಶಕರಾದ ಎಚ್‌.ಕೆ.ನಾರಾಯಣಪ್ಪ, ಚಿಕ್ಕಮರೀಗೌಡ, ಕೃಷ್ಣಪ್ಪ, ಈರೇಗೌಡ, ಮಹದೇವ, ರತ್ನಮ್ಮ, ನಾಗಮ್ಮ, ಕೃಷ್ಣಪ್ಪ, ಹಾಲು ಪರೀಕ್ಷಕ ರಾಮಕೃಷ್ಣ, ಸಹಾಯಕ ಶಿವಕುಮಾರ್‌, ಶುಚಿಗಾರ ಕರಿಯಪ್ಪ, ಮುಖಂಡ ಚನ್ನೇಗೌಡ, ರಾಜು, ಪುಟ್ಟಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next