Advertisement

Ernakulam: ಕನ್ವೆನ್ಷನ್ ಸೆಂಟರ್ ನಲ್ಲಿ ಸರಣಿ ಸ್ಫೋಟ; ಮಹಿಳೆ ಮೃತ್ಯು, 24 ಮಂದಿಗೆ ಗಾಯ

12:06 PM Oct 29, 2023 | Suhan S |

ಕೊಚ್ಚಿ: ಕಾರ್ಯಕ್ರಮವೊಂದರಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ ಮಹಿಳೆ ಮೃತಪಟ್ಟು, 24 ಮಂದಿಗೆ ಗಾಯಗೊಂಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ಭಾನುವಾರ ಮುಂಜಾನೆ(ಅ.29 ರಂದು) ನಡೆದಿದೆ.

Advertisement

ಕಲಮಸ್ಸೆರಿಯಲ್ಲಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭಾ ಕಾರ್ಯಕ್ರಮದಲ್ಲಿ ಈ ಸ್ಫೋಟ ಸಂಭವಿಸಿದೆ. ಕ್ರಿಶ್ಚಿಯನ್ ಗುಂಪಿನ ಸಮಾವೇಶ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮದಲ್ಲಿ 2000 ಮಂದಿ ಭಾಗಿಯಾಗಿದ್ದರು ಎಂದು ‘ಮನೋರಾಮಾʼ ವರದಿ ತಿಳಿಸಿದೆ.

ಸ್ಫೋಟದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಹಲವು ಬಾರಿ ಸ್ಫೋಟದ ಸದ್ದು ಕೇಳಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Cardiac arrest: ಹೃದಯಾ ಸಂಭ್ತನವಾದರೂ 48 ಪ್ರಯಾಣಿಕರ ಜೀವ ರಕ್ಷಿಸಿದ ಚಾಲಕ.!

ಮಗು ಸೇರಿದಂತೆ 7 ಮಂದಿಯನ್ನು ಐಸಿಯುಗೆ ದಾಖಲು ಮಾಡಲಾಗಿದೆ. ಒಂಬತ್ತು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಅವರನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Advertisement

ಸ್ಫೋಟಕ್ಕೆ ಕಾರಣವೇನು ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದೊಂದು ಉಗ್ರ ಕೃತ್ಯವೆಂದು ಶಂಕಿಸಲಾಗಿದೆ.

ಸ್ಫೋಟದ ಪರಿಣಾಮ ಕನ್ವೆನ್ಷನ್ ಹಾಲ್ ನಲ್ಲಿ ಅಪಾರ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ತಿಳಿಸಿದೆ.

ರಜೆಯಲ್ಲಿರುವ ವೈದ್ಯರು ಸೇರಿದಂತೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ತಕ್ಷಣ ಹಿಂತಿರುಗುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next