Advertisement
ಹೌದು, ಹಲವಾರು ರೈತರಿಗೆ 1 ಪೈಸೆ, 12 ರೂ.ನಂತೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಲಾಗಿದೆ. ಮಥುರಾ ಜಿಲ್ಲೆಯ ರೈತರೊಬ್ಬರಿಗೆ ಕೇವಲ 1 ಪೈಸೆ ಸಾಲ ಮನ್ನಾ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 1 ಪೈಸೆ ಸಾಲ ಮನ್ನಾ ಮಾಡಿರುವ ಪ್ರಮಾಣ ಪತ್ರವನ್ನು ರೈತ ಚಿದ್ಧಿಗೆ ಕಳುಹಿಸಲಾಗಿದೆ. ಚಿದ್ಧಿ ತನ್ನ ಜಮೀನಿನಲ್ಲಿ ಉಳುಮೆ ಮಾಡಲೆಂದು 2011ರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಿಂದ 1.55 ಲಕ್ಷ ರೂ. ಬೆಳೆ ಸಾಲ ಪಡೆದಿದ್ದರು. “ಸರಕಾರದ “ರಿನ್ ಮೋಚನ್ ಯೋಜನೆ’ ಪ್ರಕಾರ ನನಗೆ 1 ಲಕ್ಷ ರೂ. ಸಾಲ ಮನ್ನಾ ಆಗಬೇಕಿತ್ತು. ಆದರೆ ಪ್ರಮಾಣ ಪತ್ರದ ಮೇಲೆ 1 ಪೈಸೆ ಎಂದು ಬರೆಯಲಾಗಿದೆ. ಅದನ್ನು ನೋಡಿ ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎಂದು ಚಿದ್ಧಿ ಹೇಳಿದ್ದಾರೆ. 1 ಪೈಸೆ ಸಾಲ ಮನ್ನಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ, ಇದು ತಾಂತ್ರಿಕ ದೋಷದಿಂದ ಆಗಿರುವ ಪ್ರಮಾದ ಎಂದಿದೆ. ಆದರೆ, ಇಂಥ ಸಮಸ್ಯೆ ಚಿದ್ಧಿಗೆ ಮಾತ್ರ ಎದುರಾಗಿದ್ದಲ್ಲ. ರಾಜ್ಯಾದ್ಯಂತ ಸುಮಾರು 10,000 ರೈತರಿಗೆ ಕೇವಲ ಕೆಲ ರೂಪಾಯಿಗಳು ಮಾತ್ರವೇ ಸಾಲ ಮನ್ನಾ ಆಗಿದೆ. Advertisement
ರೈತನಿಗೆ 1 ಪೈಸೆ ಸಾಲ ಮನ್ನಾ!
10:59 AM Sep 20, 2017 | |
Advertisement
Udayavani is now on Telegram. Click here to join our channel and stay updated with the latest news.