ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ಕೋವಿಡ್ ದಿಂದ ಮೃತರಾದವರ ಕುಟುಂಬದವರಿಗೆ (ಬಿಪಿಎಲ್) ಒಂದು ಲಕ್ಷ ರೂ. ಪರಿಹಾರ ನೀಡುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಈಗಾಗಲೇ 7729 ಅರ್ಜಿಗಳು ಸ್ವೀಕೃತವಾಗಿವೆ. ಅರ್ಜಿ ಪರಿಹಾರ ವಿತರಣೆ ತಂತ್ರಾಂಶ ಅಭಿವೃದ್ಧಿ ಪಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೂಡ ಕೊವಿಡ್ ನಿಂದ ಮೃತಪಟ್ಟ ಎಲ್ಲರಿಗೂ 50 ಸಾವಿರ ನೀಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ವಿಭಾಗದಿಂದ. ನೀಡಲಾಗುವುದು. ಸುಮಾರು 200 ಕೋಟಿ ರೂ. ವೆಚ್ಚವಾಗಲಿದೆ. ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಯಾರು ದಾಖಲೆ ಇಲ್ಲದೆ ನಿಧನರಾಗಿದ್ದರೆ ಅವರನ್ನೂ ಪರಿಗಣಿಸಬೇಕು ಎಂದು ಸೂಚಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಗುರುವಾರ ಸಾಂಕೇತಿಕವಾಗಿ 10 ಜನರಿಗೆ ಪರಿಹಾರ ವಿತರಣೆ ಮಾಡಲಾಗುವುದು. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ತಂದೆ ತಾಯಿಗಳನ್ನು ಕಳೆದಕೊಂಡ ಮಕ್ಕಳ ಜವಾಬ್ದಾರಿ ನೋಡಿಕೊಳ್ಳಲು ಸರ್ಕಾರ ಬದ್ದವಾಗಿದೆ. ಬೆಂಗಳೂರಿನಲ್ಲಿ ಒಂದೇ ಕಡೆ ಚೆಕ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ನ್ಯಾಯಾಧೀಶರ ಸಾವು ಉದ್ದೇಶಪೂರ್ವಕ ಕೊಲೆ! ಧನಬಾದ್ ಕೇಸ್‌ನಲ್ಲಿ ಸಿಬಿಐ ನಿಲುವು
ಕಾಂಗ್ರೆಸ್ಸಿಗರ ಮೇಲೆ ಟೀಕೆ
ಕಾಂಗ್ರೆಸ್ ಯಾವಾಗಲೂ ಜಾತಿ ಲೆಕ್ಕದಲ್ಲಿ ರಾಜಕಾರಣ ಮಾಡುತ್ತ ಬಂದಿದೆ. ಹಿಂದೆ ಧರ್ಮ ಒಡೆಯುವ ಕೆಲಸ ಮಾಡಿತ್ತು. ಕಾಂಗ್ರೆಸ್‌ಗೆ ಅದು ಅಂಟು ಜಾಡ್ಯ. ನಮ್ಮದು ಧರ್ಮ ರಾಜಕಾರಣ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಅಶೋಕ್ ಹೇಳಿದರು.
ಕಾಂಗ್ರೆಸ್‌ನವರು ಐದು ವರ್ಷ ಮಲಗಿರುತ್ತಾರೆ. ಯುದ್ಧ ಕಾಲದಲ್ಲಿ ಹೋರಾಟ ಮಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಈಗಾಗಲೇ ಹದಿನೈದು ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಯಡಿಯೂರಪ್ಪ ಕೂಡ ರಾಜ್ಯ ಪ್ರವಾಸ ಮಾಡಲಿದ್ದಾರೆ. ಕಾಂಗ್ರೆಸ್ ನವರು ಜೆಡಿಎಸ್ ನವರನ್ನು ಅರ್ಧದಾರಿಯಲ್ಲಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಜನರಿಗೆ ಅವರ ಬಗ್ಗೆ ಜನರಿಗೆ ಭಯ ಇದೆ ಎಂದರು.