Advertisement

Medical: ನಿಯಮ ಉಲ್ಲಂಘಿಸುವ ವೈದ್ಯಕೀಯ ಕಾಲೇಜಿಗೆ 1 ಕೋಟಿ ರೂ. ದಂಡ

11:12 PM Oct 01, 2023 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿಯು(ಎನ್‌ಎಂಸಿ) ವೈದ್ಯಕೀಯ ಕಾಲೇಜುಗಳಿಗೆ ನೂತನ ನಿಯಮಗಳನ್ನು ರೂಪಿಸಿದೆ. ಅದರಂತೆ, ಪ್ರತಿ ನಿಯಮ ಉಲ್ಲಂಘನೆಗೆ ಕಾಲೇಜಿಗೆ 1 ಕೋಟಿ ರೂ. ದಂಡ ವಿಧಿಸುವ ಅಧಿಕಾರವನ್ನು ಎನ್‌ಎಂಸಿ ಹೊಂದಿದೆ.

Advertisement

ಇದಲ್ಲದೇ, ನೋಂದಾಯಿತ ವೈದ್ಯ ಕೀಯ ವೃತ್ತಿಪರರ ನಿಯಮಾವಳಿ ಗಳ ಅಡಿಯಲ್ಲಿ ವೃತ್ತಿಪರ ನೈತಿಕತೆಯ ದುರ್ವ ರ್ತನೆಗಾಗಿ ದಂಡದ ಕ್ರಮದೊಂದಿಗೆ, ಸುಳ್ಳು ಮಾಹಿತಿ ಸಲ್ಲಿಸಿದ್ದಕ್ಕಾಗಿ ಕಾಲೇಜಿನ ಸಿಬ್ಬಂದಿ, ಡೀನ್‌ ಅಥವಾ ನಿರ್ದೇಶಕರಿಗೆ 5 ಲಕ್ಷ ರೂ. ದಂಡವನ್ನು ಎನ್‌ಎಂಸಿ ವಿಧಿಸ ಲಿದೆ. ನೂತನ ನಿಯಮಾವಳಿಗಳ ಪ್ರಕಾರ, ವೈದ್ಯಕೀಯ ಕಾಲೇಜುಗಳು ಎನ್‌ಎಂಸಿಗೆ ವಾರ್ಷಿಕ ವರದಿ ಸಲ್ಲಿಸಬೇಕು. ಇದರಲ್ಲಿ ಭೌತಿಕ ಮೂಲಸೌಕರ್ಯ, ಅಧ್ಯಾಪಕರು, ವೈದ್ಯಕೀಯ ಉಪ ಕರ ಣ, ಮೌಲ್ಯಮಾಪನ ವಿಧಾನ, ವಿದ್ಯಾರ್ಥಿಗಳ ಶ್ರೇಣಿಕರಣ, ವಿದ್ಯಾರ್ಥಿಗಳ ಪ್ರತಿಕ್ರಿಯೆ ಸೇರಿ ಪ್ರಮುಖ ಮಾಹಿತಿಗಳು ಒಳಗೊಂಡಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next