Advertisement

44 ದಿನಗಳಲ್ಲಿ ಅತೀ ಕಡಿಮೆ ಪ್ರಕರಣ ಪತ್ತೆ: 24ಗಂಟೆಗಳಲ್ಲಿ 1.86 ಲಕ್ಷ ಕೋವಿಡ್ ಪ್ರಕರಣ ವರದಿ

10:03 AM May 28, 2021 | Team Udayavani |

ನವದೆಹಲಿ:ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕು ಪ್ರಕರಣ ಇಳಿಕೆಯಾಗತೊಡಗಿದ್ದು, ಕಳೆದ 24ಗಂಟೆಗಳಲ್ಲಿ 1.86 ಲಕ್ಷ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 3,660 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ(ಮೇ 28) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಜು.5ರಂದು ಅಮೆಜಾನ್ ಸಿಎಒ ಸ್ಥಾನದಿಂದ ಜೆಫ್ ಬೆಜೋಸ್ ನಿವೃತ್ತಿ

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, 1.86 ಲಕ್ಷ ಕೋವಿಡ್ 19 ಪ್ರಕರಣ ಪತ್ತೆಯಾಗುವ ಮೂಲಕ ಗಮನಾರ್ಹ ಇಳಿಕೆ ಕಂಡಿರುವುದಕ್ಕೆ ಸಾಕ್ಷಿಯಾಗಿದೆ. ಇದು ಕಳೆದ 44 ದಿನಗಳಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಪತ್ತೆಯಾದ ಪ್ರಕರಣವಾಗಿದೆ.

ಕಳೆದ 24ಗಂಟೆಗಳಲ್ಲಿ 1.86 ಲಕ್ಷ ಪ್ರಕರಣ ವರದಿಯಾಗುವ ಮೂಲಕ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 23,43,152ಕ್ಕೆ ಇಳಿಕೆಯಾಗಿದೆ. ಅಲ್ಲದೇ 24 ಗಂಟೆಗಳಲ್ಲಿ 76,755 ಸಕ್ರಿಯ ಕೋವಿಡ್ ಪ್ರಕರಣ ಇಳಿಕೆ ಕಂಡಿದೆ ಎಂದು ವರದಿ ವಿವರಿಸಿದೆ.

ಕಳೆದ 24 ಗಂಟೆಗಳಲ್ಲಿ 2,59,459 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶಾದ್ಯಂತ ಈವರೆಗೆ 2,48,93,410 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.90.34ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next