Advertisement

ವಿದೇಶದಲ್ಲಿ 1.75 ಕೋಟಿ ಭಾರತೀಯರು, ಜಗತ್ತಿನ ಒಟ್ಟು 27 ಕೋಟಿ ಮಂದಿ ವಲಸಿಗರು

09:44 AM Nov 29, 2019 | sudhir |

ವಿಶ್ವಸಂಸ್ಥೆ: ವಿದೇಶದಲ್ಲಿ ವಾಸಿಸುವ ಜನರ ಪೈಕಿ ಭಾರತೀಯರೇ ಹೆಚ್ಚು ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸುಮಾರು 17.5 ಮಿಲಿಯನ್‌ ಅಂದರೆ 1.75 ಕೋಟಿ ರೂ. ಭಾರತೀಯರು ಪ್ರಪಂಚದ ನಾನಾ ರಾಷ್ಟ್ರದಲ್ಲಿ ಹಂಚಿಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಜಗತ್ತಿನ ಸುಮಾರು 270 ಮಿಲಿಯನ್‌ (27 ಕೋಟಿ) ಮಂದಿ ತಮ್ಮ ದೇಶವನ್ನು ತೊರೆದು ವಿದೇಶದಲ್ಲಿ ಉದ್ಯೋಗ, ಶಿಕ್ಷಣ ಮೊದಲಾದ ಕಾರಣಗಳಿಗೆ ನೆಲೆಸಿದ್ದಾರೆ.

Advertisement

ಅಮೆರಿಕದಲ್ಲಿ ಹೆಚ್ಚು

ಜಗತ್ತಿನ ನಾನ ದೇಶಗಳ ಅಧಿಕ ಮಂದಿ ಅಮೆರಿಕದತ್ತ ಮುಖ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ಅತೀ ಹೆಚ್ಚು ವಲಸಿಗರು ನೆಲೆಸಿದ್ದಾರೆ. ಸುಮಾರು 5.1 ಕೋಟಿ ಮಂದಿ ವಲಸಿಗರು ಅಮೆರಿಕದಲ್ಲಿದ್ದಾರೆ. ಒಟ್ಟು ವಲಸಿಗರ ಸುಮಾರು ಅರ್ಧದಷ್ಟು ಮಂದಿ ಯುರೋಪ್‌ ಮತ್ತು ಅಮೆರಿಕದಲ್ಲಿ ಹಂಚಿ ಹೋಗಿದ್ದಾರೆ. 141 ಮಿಲಿಯನ್‌ (14.1 ಕೋಟಿ) ವಲಸಿಗರು ಈ ಎರಡು ರಾಷ್ಟ್ರಗಳಲ್ಲಿ ಹಂಚಿಹೋಗಿದ್ದಾರೆ. ಶೇ. 52ರಷ್ಟು ಉದ್ಯೋಗದ ಕಾರಣಕ್ಕೆ ವಿದೇಶದಲ್ಲಿ ನೆಲೆಸಿದ್ದಾರೆ. ಉಳಿದಂತೆ ಫ್ರಾನ್ಸ್‌, ರಷ್ಯಾ, ಯುಎಇ ರಾಷ್ಟ್ರಗಳಿಗೆ ಜನ ಹೆಚ್ಚು ತೆರಳುತ್ತಿದ್ದಾರೆ. ವಿಶೇಷ ಎಂದರೆ ಆಫ್ರಿಕಾದವರು ತಮ್ಮ ಖಂಡವನ್ನು ಬಿಟ್ಟು ತೆರಳುವುದು ವಿರಳ.

ಆದಾಯವೂ ಹೆಚ್ಚು (1 ಬಿಲಿಯನ್‌ ಎಂದರೆ 100 ಕೋಟಿ)

ವಿದೇಶದಲ್ಲಿ ವಲಸಿಗರು ನೆಲೆಸಿದ ಪರಿಣಾಮ ವಿದೇಶಿ ಹಣದ ಹರಿವೂ ಹೆಚ್ಚಾಗಿದ್ದು, ಒಟ್ಟು 689 ಬಿಲಿಯನ್‌ ಡಾಲರ್‌ (49,302.77 ಬಿಲಿಯನ್‌ ರೂ.) ಮೌಲ್ಯ ಇದರಿಂದ ಒಳ ಹರಿವಿನ ರೂಪದಲ್ಲಿ ಜಗತ್ತಿನ ನಾನಾ ದೇಶಕ್ಕೆ ಸಂಗ್ರಹವಾಗುತ್ತಿದೆ. ವಿದೇಶಿ ಕರೆನ್ಸಿಗಳಲ್ಲಿ ಭಾರತದ ಪಾಲು ಅಧಿಕವಿದೆ. ಭಾರತ 78.6 ಬಿಲಿಯನ್‌ ಡಾಲರ್‌ (5,624.38 ಬಿ. ರೂ.), ಚೀನ 67.4 ಬಿಲಿಯನ್‌ (4,822.60 ಬಿ. ರೂ.), ಮೆಕ್ಸಿಕೋ 35.7 ಬಿಲಿಯನ್‌ (2,554.41 ಬಿ. ರೂ.) ಆದಾಯ ಗಳಿಸುತ್ತಿವೆ.

Advertisement

ಅಮೆರಿಕದ ಪಾಲು ದೊಡ್ಡದು

ಅಮೆರಿಕದಲ್ಲಿ ಅಧಿಕ ವಲಸಿಗರು ವಾಸಮಾಡುತ್ತಿದ್ದಾರೆ. ಇದು ಪರೋಕ್ಷವಾಗಿ ಆ ದೇಶಕ್ಕೆ ಶ್ರಮದ ಉಳಿತಾಯವಾಗುವುದರ ಜತೆಗೆ ಸುಮಾರು 68 ಬಿಲಿಯನ್‌ ಡಾಲರ್‌ (4865.54 ಬಿ. ರೂ.) ಪಾಲನ್ನು ಹೊಂದಿದೆ. ದ್ವಿತೀಯ ರಾಷ್ಟವಾಗಿ ಯುಎಇ ಇದ್ದು, ಅದು ಸುಮಾರು 44.4 ಬಿಲಿಯನ್‌ ಡಾಲರ್‌ (3,176.91 ಬಿ.ರೂ.), ಸೌದಿ ಅರೇಬಿಯಾ 36.1 ಬಿಲಿಯನ್‌ ಡಾಲರ್‌ (2583.03 ಬಿ. ರೂ.) ಗಳನ್ನು ವಲಸಿಗರಿಗಾಗಿ ಪಾವತಿ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next