Advertisement

Fraud Case ಕ್ರೆಡಿಟ್‌ ಕಾರ್ಡ್‌ನಿಂದ 1.55 ಲಕ್ಷ ರೂ. ವರ್ಗಾಯಿಸಿ ವಂಚನೆ

10:22 PM Oct 02, 2023 | Team Udayavani |

ಮಂಗಳೂರು: ಕ್ರೆಡಿಟ್‌ ಕಾರ್ಡ್‌ನಿಂದ 1.55 ಲ.ರೂ.ಗಳನ್ನು ಅನಧಿಕೃತವಾಗಿ ವರ್ಗಾಯಿಸಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Advertisement

ದೂರುದಾರರು ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದು, ಅವರ ಮೊಬೈಲ್‌ಗೆ ಸೆ. 10ರಂದು ಹಲವು ಒಟಿಪಿಗಳ ಸಂದೇಶ ಬಂದಿದ್ದವು. ಅಲ್ಲದೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು.

ಅವರು ಯಾವುದೇ ಕರೆ ಸ್ವೀಕರಿಸದೆ ಕೂಡಲೇ ತಮ್ಮ ಮೊಬೈಲ್‌ನಿಂದ ಐಸಿಐಸಿಐ ಆ್ಯಪ್‌ ತೆರೆದು ಕ್ರೆಡಿಟ್‌ ಕಾರ್ಡ್‌ ಬ್ಲಾಕ್‌ ಮಾಡಿದ್ದರು. ಅಲ್ಲದೆ ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ನ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಕಾರ್ಡ್‌ ಬ್ಲಾಕ್‌ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದರು.

ಕಾರ್ಡ್‌ ಬ್ಲಾಕ್‌ ಆಗಿರುವ ಬಗ್ಗೆ ಈ ಮೇಲ್‌ ಕೂಡ ಕಸ್ಟಮರ್‌ ಕೇರ್‌ನವರಿಂದ ಬಂದಿತ್ತು. ಮರುದಿನ ರಾತ್ರಿ ಆ್ಯಪ್‌ ಮೂಲಕ ಕ್ರೆಡಿಟ್‌ ಕಾರ್ಡ್‌ನ ಸ್ಟೇಟಸ್‌ ನೋಡಿದಾಗ 1,60,401 ರೂ. ಔಟ್‌ಸ್ಟಾಂಡಿಂಗ್‌ ಇರುವುದಾಗಿ ತೋರಿಸಿತು. ಕೂಡಲೇ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ವಿಚಾರಿಸಿದಾಗ ಯಾರೋ ಅಪರಿಚಿತರು ಆನ್‌ಲೈನ್‌ ಮೂಲಕ ಮೋಸದಿಂದ 1.55 ಲ.ರೂ.ಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next