ಕಾಸರಗೋಡು: ಮೊಬೈಲ್ ಅಪ್ಲಿಕೇಶನ್ ಮೂಲಕ ಯುವಕನ ಒಂದೂವರೆ ಲಕ್ಷ ರೂ. ಲಪಟಾಯಿಸಿರುವುದಾಗಿ ದೂರಲಾಗಿದೆ.
Advertisement
ತಾಯನ್ನೂರು ಎಣ್ಣಪ್ಪಾರ ಕುಟ್ಟಿಯಡ್ಕದ ಟಿ.ಕೆ. ಧನೇಶ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪರಿಚಿತ ತಂಡ 1,41,522 ರೂ. ಲಪಟಾಯಿಸಿದ್ದಾಗಿ ದೂರಲಾಗಿದೆ. ವರ್ಕ್ ಫ್ರಂ ಹೋಂ ಮೂಲಕ ಕಮಿಷನ್ ನೀಡುವುದಾಗಿ ತಿಳಿಸಿ ಮೋಸ ಮಾಡಲಾಗಿದೆ. ತಂಡಕ್ಕೆ ಮೊಬೈಲ್ ಅಪ್ಲಿಕೇಶನ್ ಮೂಲಕ ಹಣ ಕಳುಹಿಸಿಕೊಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.