Advertisement
ತುಂಗಭದ್ರಾ ಜಲಾಶಯವು ಭರ್ತಿಯಾಗಿ ನಾಲ್ಕೈದು ದಿನಗಳಾಗಿವೆ. ಆದರೆ ಮಲೆನಾಡು ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗಿದ್ದರಿಂದ ಬಯಲು ಸೀಮೆಯ ತುಂಗಭದ್ರೆಗೆ ಹೆಚ್ಚು ನೀರು ಹರಿದು ಬರುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಒಳ ಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ನಷ್ಟಿದೆ. ಶುಕ್ರವಾರ ಡ್ಯಾಂನ ಒಳ ಹರಿವು 1,00,871 ಕ್ಯೂಸೆಕ್ ನಷ್ಟಿದ್ದರೆ, ಶನಿವಾರದ ವೇಳೆಗೆ ಡ್ಯಾಂನ ಒಳ ಹರಿವು 1,17,950 ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ಡ್ಯಾಂನಲ್ಲಿನ ನೀರು ಸಂಗ್ರಹ ಸಾಮರ್ಥ್ಯ, ಒಳ ಹರಿವಿನ ಲೆಕ್ಕಾಚಾರದಲ್ಲಿಯೇ ನದಿಪಾತ್ರಗಳಿಗೆ ನೀರನ್ನು ಹರಿ ಬಿಡಲಾಗುತ್ತಿದೆ. ಶುಕ್ರವಾರ ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆಯಾಗಿದ್ದರೆ ಶನಿವಾರ ಮತ್ತೆ 50 ಸಾವಿರ ಹೆಚ್ಚುವರಿ ಸೇರಿ ಒಟ್ಟು 1.50 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿ ಬಿಡಲಾಗಿದೆ.
Related Articles
Advertisement
ನದಿಪಾತ್ರದಲ್ಲಿ ನಿಷೇಧಾಜ್ಞೆ
ಡ್ಯಾಂನ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು, ನದಿ ಪಾತ್ರದಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಹಾಗಾಗಿ ನದಿಪಾತ್ರದ ಬ್ರಿಜ್, ಬ್ಯಾರೇಜ್ ಭೋರ್ಗರೆಯುತ್ತಿವೆ. ಈ ವೇಳೆ ನದಿಪಾತ್ರದಲ್ಲಿನ ಹಳ್ಳಿಗಳ ಜನರು ಯಾವುದೇ ಕಾರಣಕ್ಕೂ ನದಿ ತಟದ ನೂರು ಮೀಟರ್ ವ್ಯಾಪ್ತಿಯಲ್ಲಿ ಆ.10ರವರೆಗೂ ಸಂಚಾರ ಮಾಡದಂತೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.