ಲಕ್ನೋ: ರಾಜ್ಯಾದ್ಯಂತ ಈವರೆಗೆ 45 ವರ್ಷ ಮೇಲ್ಪಟ್ಟ ಸುಮಾರು 1.43ಕೋಟಿ ಜನರಿಗೆ ಕೋವಿಡ್ 19 ಲಸಿಕೆಯನ್ನು ನೀಡಲಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ(ಮೇ 13) ತಿಳಿಸಿದ್ದಾರೆ.
ಇದನ್ನೂ ಓದಿ:ಹೀರೋ ಮೊಟೊಕಾರ್ಪ್ ಬಿಡುಗಡೆಗೊಳಿಸಲಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ..! ಮಾಹಿತಿ ಇಲ್ಲಿದೆ
18ರಿಂದ 45 ವರ್ಷದೊಳಗಿನ ಸುಮಾರು 2,65,745 ಜನರಿಗೆ ಕೋವಿಡ್ 19 ಲಸಿಕೆಯನ್ನು ನೀಡಲಾಗಿದೆ. ಅಲ್ಲದೇ ರಾಜ್ಯಾದ್ಯಂತ ಇರುವ ಕೋವಿಡ್ ಕೇರ್ ಸೆಂಟರ್ ಗಳಿಗೆ 20,000 ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಲಾಗಿದೆ ಎಂದು ಯೋಗಿ ಮಾಹಿತಿ ನೀಡಿದ್ದಾರೆ.
ಮಾರಣಾಂತಿಕ ಕೋವಿಡ್ 19 ಸೋಂಕಿನಿಂದ ಅಲಿಘಡ್ ಮುಸ್ಲಿಂ ಯೂನಿರ್ವಸಿಟಿಯ ಹಲವು ಮಂದಿ ಪ್ರಾಧ್ಯಾಪಕರು ನಿಧನರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿವಿಯ ಉಪಕುಲಪತಿ ತಾರಿಖ್ ಮನ್ಸೂರ್ ಮತ್ತು ಇತರ ಅಧಿಕಾರಿಗಳ ಜತೆ ಯೋಗಿ ಚರ್ಚೆ ನಡೆಸಿರುವುದಾಗಿ ವರದಿ ಹೇಳಿದೆ.