Advertisement

1.40 ಕೋಟಿ ಮೌಲ್ಯದ ಮದ್ಯ ಜಪ್ತಿ

08:51 PM Jun 05, 2021 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಏ. 23ರಿಂದ ಜೂ. 3ರವರೆಗೆ 1,40,86,197 ರೂ. ಮೌಲ್ಯದ ವಿವಿಧ ಮಾದರಿಯ ಅಬಕಾರಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಸಿ. ಸೇಲಿನಾ ತಿಳಿಸಿದ್ದಾರೆ.

Advertisement

ಏ. 23ರಿಂದ ಜೂ. 3ರವರೆಗೆ ಅಬಕಾರಿ ಇಲಾಖೆಯಿಂದ ಜಿಲ್ಲಾದ್ಯಂತ 45 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಅವುಗಳಲ್ಲಿ 16 ಘೋರ, 7 ಬಿಎಲ್‌ಸಿ ಹಾಗೂ 15(ಎ) ಅಡಿ 24 ಸೇರಿದಂತೆ ಒಟ್ಟು 47 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3 ಆರೋಪಿಗಳನ್ನು ಬಂಧಿ ಸಲಾಗಿದೆ.

ದಾಳಿ ವೇಳೆ 8 ವಾಹನಗಳು, 15069.390 ಲೀ. ಮದ್ಯ, 44.340 ಲೀಟರ್‌ ಬಿಯರ್‌, 5 ಲೀ. ಐಡಿ ಮತ್ತು 40,000 ಲೀ. ಮದ್ಯಸಾರವನ್ನು ಜಪ್ತಿ ಮಾಡಲಾಗಿದೆ. ಅವುಗಳ ಒಟ್ಟು ಮೌಲ್ಯ 1,40,86,197 ರೂ. ಆಗಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಮೇ 17ರಿಂದ ಜೂ. 7ರ ಮಧ್ಯರಾತ್ರಿ 12ರ ವರೆಗೂ ಜಿಲ್ಲಾಧಿ ಕಾರಿಗಳು ಮದ್ಯ ಮಾರಾಟ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಧದ ಸನ್ನದುಗಳನ್ನು ಇಲಾಖೆ ಸೀಲಿನಿಂದ ಸೀಲು ಮಾಡಿ ಬಂದ್‌ ಮಾಡಿಸಿದೆ.

ಲಾಕ್‌ಡೌನ್‌ ಅವಧಿಯಲ್ಲಿ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಬಂದ ವರದಿ ಅನುಸಾರ ಗಂಗಾವತಿ ವಲಯದ 2 ಸಿಎಲ್‌-7 ಸನ್ನದುಗಳನ್ನು ಡಿಸಿ ಆದೇಶದನ್ವಯ ಮೇ 24ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತುಗೊಳಿಸಲಾಗಿದೆ. ವ್ಯಸನಿಗಳು ಇತರೆ ಮಾದಕ ವಸ್ತುಗಳಾದ ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ, ಸ್ಯಾನಿಟೈಸರ್‌, ವಾರ್ನಿಶ್‌ ನಂತಹ ರಾಸಾಯನಿಕ ವಸ್ತುಗಳನ್ನು ಸೇವನೆ ಮಾಡಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಬಕಾರಿ ಉಪ ಆಯುಕ್ತ ಸಿ. ಸೇಲಿನಾ ಮೊ. 9449597170, ಕೊಪ್ಪಳ ಮೊ. 9449597175, ವಿಚಕ್ಷಣ ದಳದ ಸ್ವತಂತ್ರಕುಮಾರ ಮೊ. 9591795689, ರಮೇಶ ಅಗಡಿ ಮೊ. 7675114929, ಗಂಗಾವತಿ ಮೊ. 9740394078, ಕುಷ್ಟಗಿ ಮೊ. 9845947828 ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next