ಮಂಗಳೂರು: ಹೊಸ ವರ್ಷದ ಆರಂಭದಲ್ಲೇ ಮೆಸ್ಕಾಂ ಗ್ರಾಹಕರಿಗೆ ದರ ಏರಿಕೆಯ ಶಾಕ್ ನೀಡುವ ಸುಳಿವು ನೀಡಿದೆ. 2023-24ನೇ ಸಾಲಿಗೆ ಪ್ರತೀ ಯೂನಿಟ್‌ಗೆ ಸರಾಸರಿ 1.38 ರೂ. ದರ ಏರಿಕೆಗೆ ಪ್ರಸ್ತಾವನೆ ಸಿದ್ಧಪಡಿಸಿದೆ.
ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಮೆಸ್ಕಾಂ ವತಿಯಿಂದ ಕರ್ನಾಟಕ ವಿದ್ಯು ತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸು ವವರು ಕರ್ನಾಟಕ ವಿದ್ಯುತ್ಛಕ್ತಿ ನಿಯಂ ತ್ರಣ ಆಯೋಗ, ಬೆಂಗಳೂರು ಹಾಗೂ ಮಂಗಳೂರಿನ ಮೆಸ್ಕಾಂ ಕೇಂದ್ರ ಕಚೇರಿಗೆ ಪತ್ರ ಮೂಲಕ ದೂರು ನೀಡಲು ಅವಕಾಶವಿದೆ.
ಮೆಸ್ಕಾಂ ಪ್ರಕಾರ ಸರಾಸರಿ ಸರಬರಾಜು ವೆಚ್ಚ ಪ್ರತೀ ಯೂನಿಟ್‌ಗೆ 9.93 ರೂ. ಆಗುತ್ತಿದ್ದು, ಪ್ರತೀ ಯೂನಿಟ್‌ಗೆ 7.95 ರೂ. ಈಗಾಗಲೇ ಸರಾಸರಿ ವಸೂಲಾತಿ ಅಂದಾಜಿಸಲಾಗಿದೆ. ಹೀಗಾಗಿ ಪ್ರತೀ ಯೂನಿಟ್‌ಗೆ 1.38 ರೂ. ಕೊರತೆ ಎದು ರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂಬುದು ಮೆಸ್ಕಾಂ ವಾದ. ನಗರ ಪ್ರದೇಶಗಳಿಗೆ ಎಲ್.ಟಿ.-2 ಎ (ನಿವಾಸ ಗೃಹಗಳ ದೀಪ ಬಳಕೆ/ ಸಂಯುಕ್ತ ದೀಪ, ತಾಪನ ಹಾಗೂ ಮೋಟಿವ್ ಪವರ್‌ನ ಸ್ಥಾಪನೆ)ಗೆ ಹಾಲಿ ಮೊದಲ ಕಿ.ವ್ಯಾ.ಗೆ 100 ರೂ., (ಗ್ರಾಮೀಣ 85 ರೂ.), 50 ಕಿ.ವ್ಯಾ.ವರೆಗೆ ಪ್ರತೀ ಹೆಚ್ಚುವರಿ ಕಿ.ವ್ಯಾ.ಗೆ 110 ರೂ., (100 ರೂ.), 50 ಕಿ.ವ್ಯಾ ಮೀರಿದ ಹೆಚ್ಚುವರಿ ಹೊರೆಗೆ 175 ರೂ. (160 ರೂ.) ಪ್ರಸ್ತುತ ದರವಿದ್ದು, ಇದನ್ನು ಪ್ರತೀ ಕಿ.ವ್ಯಾಟ್‌ಗೆ 150 ರೂ.ಗೆ ನಿಗದಿ ಮಾಡುವಂತೆ ಪ್ರಸ್ತಾವಿಸಿದೆ.
ಹೊಂದಾಣಿಕೆ ವೆಚ್ಚ ಹಿಂಪಾವತಿ
ಇದೇವೇಳೆ ಗ್ರಾಹಕರಿಗೆ ಕೊಂಚ ಸಮಾ ಧಾನದ ಸುದ್ದಿಯಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚವನ್ನು ಸೀಮಿತ ಅವಧಿಗೆ 15 ಪೈಸೆ ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೆಇಆರ್‌ಸಿ (ಇಂಧನ ಹಾಗೂ ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ) ನಿಯಮಗಳು 2022 ಹಾಗೂ ಅದರ ತಿದ್ದುಪಡಿಗಳ ನಿಬಂಧನೆಗಳ ಪ್ರಕಾರ ಆಯೋಗವು 2ನೇ ತ್ತೈಮಾಸಿಕದಲ್ಲಿ (2022ರ ಜುಲೈಯಿಂದ ಸೆಪ್ಟಂಬರ್‌ವರೆಗೆ) ಒಟ್ಟಾರೆ ಇಂಧನ ಹಾಗೂ ವಿದ್ಯುತ್ ಖರೀದಿ ವೆಚ್ಚದಲ್ಲಿ ಇಳಿಕೆಯನ್ನು ಗುರುತಿಸಿದೆ.
ಹೀಗಾಗಿ ಜ. 1ರಿಂದ ಮಾ. 31ರವರೆಗೆ ಅನ್ವಯವಾಗುವಂತೆ ಬಿಲ್ಲಿಂಗ್ ಅವಧಿಯಲ್ಲಿ ಪ್ರತೀ ಯೂನಿಟ್‌ಗೆ 15 ಪೈಸೆ ಹೊಂದಾಣಿಕೆ ಮೂಲಕ ಹಿಂಪಾವತಿ ಮಾಡುವ ಬಗ್ಗೆ ಮೆಸ್ಕಾಂ ತಿಳಿಸಿದೆ.
ಈ ಹಿಂದೆ ಪ್ರತೀ ಯೂನಿಟ್‌ಗೆ 37 ಪೈಸೆ ಮರುಪಾವತಿ ಮಾಡಲಾಗುತ್ತದೆ ಎಂದು ವರದಿಯಾಗಿತ್ತು.