Advertisement
ವ್ಯಕ್ತಿಯೋರ್ವರಿಗೆ ಜ. 3ರಂದು ಫೇಸ್‌ಬುಕ್ ಖಾತೆಯ ಮೂಲಕ ರೇನಾಲ್ಟ್ ಫ್ರೀನ್ಸ್ ಕ್ರಿಸ್ಟಫರ್ ಪರಿಚಯವಾಗಿದ್ದ. ಫೇಸ್‌ಬುಕ್‌ನಲ್ಲೇ ಚಾಟಿಂಗ್ ಮಾಡುತ್ತಿದ್ದ ರೇನಾಲ್ಟ್ 35 ಲ.ರೂ. ಮೊತ್ತದ ಚಿನ್ನ ಹಾಗೂ ಡೈಮಂಡ್ ಉಡುಗೊರೆಯಾಗಿ ನಿಮಗೆ ಕಳುಹಿಸಿಕೊಡುವುದಾಗಿ ವ್ಯಕ್ತಿಯನ್ನು ನಂಬಿಸಿದ್ದ. ಜ. 18ರಂದು ಆ ವ್ಯಕ್ತಿಗೆ 8754231656 ಈ ಸಂಖ್ಯೆಯಿಂದ ಓರ್ವ ಮಹಿಳೆ ಕರೆ ಮಾಡಿ ತನ್ನನ್ನು ಹೊಸದಿಲ್ಲಿಯ ಕಸ್ಟಮ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದಾಳೆ. ದಿಲ್ಲಿ ಏರ್‌ಪೋರ್ಟ್‌ಗೆ ಒಂದು ಪಾರ್ಸೆಲ್ ಬಂದಿದ್ದು, ಅದರ ಡೆಲಿವರಿ ಚಾರ್ಜ್ ಆಗಿ 30,000 ರೂ.ಗಳನ್ನು ವರ್ಗಾವಣೆ ಮಾಡುವಂತೆ ಹೇಳಿದ್ದಳು. ಜ. 20ರಂದು ಮತ್ತೆ ಮಹಿಳೆ ಆ ವ್ಯಕ್ತಿಗೆ ಕರೆ ಮಾಡಿ 1.5 ಲ.ರೂ.ಗಳನ್ನು ವಿವಿಧ ಹಂತಗಳಲ್ಲಿ ವಿವಿಧ ಬ್ಯಾಂಕ್‌ಗಳ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಹೀಗೆ ಒಟ್ಟು 1.35 ಲ.ರೂ.ಗಳನ್ನು ಆಕೆಯ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. Advertisement
ಉಡುಗೊರೆ ಆಮಿಷ: 1.35 ಲ.ರೂ. ವಂಚನೆ
01:25 AM Jan 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.