Advertisement

ಗುಜರಾತ್‌ನಲ್ಲಿ 1.30 ಲಕ್ಷ ಬಾಲಕಾರ್ಮಿಕರು!

12:07 PM Nov 03, 2015 | mahesh |

ಅಹ್ಮದಾಬಾದ್‌: ಗುಜರಾತ್‌ನ ಹತ್ತಿಬೀಜದ ಫಾರ್ಮ್ಗಳು ಬಾಲ ಕಾರ್ಮಿಕರ ಗೂಡುಗಳಾಗಿವೆ. ಅಂದಾಜು 1.30 ಲಕ್ಷ ಮಕ್ಕಳು ಇವುಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ!

Advertisement

ಹೀಗೊಂದು ಆತಂಕಕಾರಿ ಸಂಗತಿಯನ್ನು ನಗರದ ಎನ್‌ಜಿಒ ಸ್ಫೋಟಿಸಿದೆ. “ಈ ಮಕ್ಕಳಲ್ಲಿ ಬಹುತೇಕರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಕೇವಲ 150 ರೂ. ದಿನಗೂಲಿಗೆ ದುಡಿಯುತ್ತಿದ್ದಾರೆ’ ಎಂದು ಸೆಂಟರ್‌ ಫಾರ್‌ ಲೇಬರ್‌ ರಿಸರ್ಚ್‌ ಆ್ಯಂಡ್‌ ಆ್ಯಕ್ಷನ್‌ನ ಸುಧೀರ್‌ ಕಟಿಯಾರ್‌ ತಿಳಿಸಿದ್ದಾರೆ.

ಕಾರಣ ಏನು?: “ಹೆಚ್ಚಿನ ಬುಡಕಟ್ಟು ಕಾರ್ಮಿಕರನ್ನು ಹೊಂದಿರುವ ಫಾರ್ಮ್ಗಳಲ್ಲಿ ಕನಿಷ್ಠ ಕೂಲಿಯನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಕೂಲಿಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ. 10 ವರ್ಷಗಳ ಹಿಂದೆ ಸರಕಾರ ಬಾಲಕಾರ್ಮಿಕ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಾಗ ಉತ್ತರ ಗುಜರಾತ್‌ನಿಂದ ಹಲವರು ಬುಡಕಟ್ಟು ವಲಯದ ಹತ್ತಿಬೀಜದ ಫಾರ್ಮ್ ಗಳಿಗೆ ವಲಸೆ ಹೋಗಿದ್ದಾರೆ. ಬನಸ್ಕಾಂತ, ಸಬರ್‌ಕಾಂತ, ಅರಾವಳಿ, ಮಹಿಸಾಗರ್‌ ಮತ್ತು ಛೋಟಾಡೇಪುರ್‌ ಜಿಲ್ಲೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next