Advertisement
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆ ಪ್ರಕ್ರಿಯೆಯು ರಾತ್ರ 7 ಗಂಟೆವರೆಗೂ ಜರುಗಿತು. ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಕ್ಷಮದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಜರುಗಿತು.
Related Articles
ಕೊರೋನಾ ಪ್ರಾರಂಭವಾದ ಬಳಿಕ ಲಾಕ್‍ಡೌನ್ ಹಿನ್ನೆಲೆ ದೇವಾಲಯ ಬಂದ್, ಅಮಾವಾಸ್ಯೆ ಪೂಜಾ ಕೈಂಕರ್ಯಗಳ ವೇಳೆ ಭಕ್ತಾದಿಗಳ ಪ್ರವೇಶ ನಿಷಿದ್ಧ ಸೇರಿದಂತೆ 20 ತಿಂಗಳಿನಿಂದ ಮಾದಪ್ಪನ ಆದಾಯದಲ್ಲಿ ಗಣನೀಯವಾಗಿ ಕುಂಠಿತವಾಗಿತ್ತು. ಇದೀಗ ಒಂದು ತಿಂಗಳ ಅವಧಿಗೆ ಸರಿ ಸುಮಾರು 1.3ಕೋಟಿ ಆದಾಯ ಸಂಗ್ರಹವಾಗುತ್ತಿರುವುದು ಕೊರೋನಾ ಮುಂಚೆ ಬರುತ್ತಿದ್ದಂತಹ ಆದಾಯವಾಗಿದೆ. ಒಟ್ಟಾರೆ 20 ತಿಂಗಳ ನಂತರ ಮಾದಪ್ಪನ ಹುಂಡಿ ಆದಾಯ, ಸೇವೆಗಳು ಆದಾಯ ಯಥಾಸ್ಥಿತಿಯತ್ತ ಬರುತ್ತಿದೆ. ಎಣ್ಣೆಮಜ್ಜನ ಸೇವೆ, ಹಬ್ಬ-ಹರಿದಿನಗಳಂದು ಕೂಡ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದಲ್ಲಿ ಆದಾಯ ಮತ್ತಷ್ಟು ಏರಿಕೆಯಾಗಲಿದೆ.
Advertisement