Advertisement

‘ಸಂಗೀತ ಸಂಜೆ’ಯ ಮೂಲಕ ಶಾಲಾ ಕಟ್ಟಡಕ್ಕೆ 1.20 ಲಕ್ಷ ರೂ.ದೇಣಿಗೆ ನೀಡಿದ್ದರು ಎಸ್ ಪಿಬಿ !

07:20 PM Sep 25, 2020 | Mithun PG |

ಗಂಗಾವತಿ: ನಗರದ ವಿದ್ಯಾನಗರದಲ್ಲಿರುವ ಶಾರದಾ ಎಜುಕೇಶನ್ ಸಂಸ್ಥೆ ಶಾಲಾ ಕಟ್ಟಡ ನಿರ್ಮಾಣಕ್ಕೆ 1977 ರಲ್ಲಿ ಗಂಗಾವತಿಗೆ ಆಗಮಿಸಿದ್ದ ಗಾಯಕ ಎಸ್ ಪಿಬಿ  ಸಂಗೀತ ಸಂಜೆ ನಡೆಸಿ ಅದರಿಂದ ಬಂದ 1.20 ಲಕ್ಷ ರೂ.ಗಳನ್ನು ಕಟ್ಟಡ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಿದ್ದರು.

Advertisement

ವಲಸೆ ತೆಲುಗು ಆಂದ್ರ ಜನತೆಯ ಮಕ್ಕಳಿಗಾಗಿ ವಿದ್ಯಾನಗರದಲ್ಲಿ ಶಾರದಾ ಎಜುಕೇಶನ್ ಸಂಸ್ಥೆ ಸ್ಥಾಪಿಸಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡಲು‌ ಸಂಸ್ಥೆಯವರು ಮದ್ರಾಸ್ ನಿಂದ ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ತಂಡದವರನ್ನು ಕರೆಯಿಸಿ ಸಂಗೀತ ಸಂಜೆ ಹಮ್ಮಿಕೊಂಡಿದ್ದರು. ಎಸ್ ಪಿಬಿಯವರು‌ ಸಂಭಾವನೆ ಸ್ವೀಕರಿಸದೇ ಶಾಲೆಯ ಕಟ್ಟಡ ನಿರ್ಮಿಸುವಂತೆ ಹಣವನ್ನು ಮರಳಿಸಿ ಹೇಳಿದ್ದರು.

ಒಂದೇ ತಾಯಿಯ‌ ಮಕ್ಕಳು: ಕನ್ನಡ ತೆಲುಗು ಭಾಷಿಕರು ಒಂದೇ ತಾಯಿಯ ಮಕ್ಕಳು. ಸಂಸ್ಕೃತಿ ಜೀವನ ಶೈಲಿ ಒಂದೇ ಆಗಿದ್ದು ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಎರಡು ರಾಜ್ಯಗಳನ್ನು ಬೆಸೆದಿದ್ದರು. ಈಗ ತುಂಗಭದ್ರಾ ಡ್ಯಾಂ ಎರಡು ರಾಜ್ಯಗಳ ಬಾಂಧವ್ಯ ಬೆಸೆದಿದೆ ಎಂದು ಎಸ್.ಬಿ ಬಾಲಸುಬ್ರಹ್ಮಣ್ಯಂ ಹೇಳಿದ್ದರೆಂದು ಸಂಸ್ಥೆ ಅಧ್ಯಕ್ಷ ತಮ್ಮಿನೀಡಿ ಸತ್ಯನಾರಾಯಣ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next