Advertisement

Gold: 1.2 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ: ಮೂವರ ಸೆರೆ

12:48 AM Nov 03, 2023 | Team Udayavani |

ಕಾಸರಗೋಡು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಾಸರಗೋಡು ನಿವಾಸಿಗಳ ಸಹಿತ ಮೂವರಿಂದ 1.2 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Advertisement

ಅಬುಧಾಬಿಯಿಂದ ಬಂದ ಕಾಸರಗೋಡು ಉದುಮ ನಿವಾಸಿ ಅಲ್‌ ಅಮೀನ್‌ ಮತ್ತು ಕಲ್ಲಿಕೋಟೆ ಕೊಡುವಳ್ಳಿ ನಿವಾಸಿ ಜಂಶಾದ್‌ ಹಾಗೂ ಶಾರ್ಜಾದಿಂದ ಬಂದ ತಳಂಗರೆ ನಿವಾಸಿ ರಫೀಕ್‌ನನ್ನು ಬಂಧಿಸಲಾಗಿದೆ. ಅಲ್‌ ಅಮೀನ್‌ನಿಂದ 27,52,088 ರೂ. ಮೌಲ್ಯದ 454.14 ಗ್ರಾಂ ಚಿನ್ನ, ರಫೀಕ್‌ನಿಂದ 14,63,490 ರೂ. ಮೌಲ್ಯದ 241 ಗ್ರಾಂ, ಜಂಶಾದ್‌ನಿಂದ 60,11,520 ರೂ. ಮೌಲ್ಯದ 992 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next