ಬೆಂಗಳೂರು: ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ 15ನೇ ಆವೃತ್ತಿಯ ಐಪಿಎಲ್ ನ ಮೆಗಾ ಹರಾಜು ನಡೆಯಲಿದೆ. ಇದೀಗ ಐಪಿಎಲ್ ಹರಾಜು ಪಟ್ಟಿಗೆ ಮತ್ತೆ ಹತ್ತು ಮಂದಿ ಆಟಗಾರರ ಹೆಸರನ್ನು ಸೇರ್ಪಡೆ ಮಾಡಿದೆ.
ಇದರೊಂದಿಗೆ ಈ ಬಾರಿಯ ಹರಾಜಿನ ಭಾಗವಾಗಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೇರ್ಪಡೆಯಾದ ಆಟಗಾರರ ಪೈಕಿ ಮೂವರು ವಿದೇಶಿಯರಿದ್ದು, ಏಳು ಮಂದಿ ಭಾರತೀಯ ಆಟಗಾರರಿದ್ದಾರೆ.
ಅಗ್ನಿವೇಶ್ ಅಯಾಚಿ, ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ರೋಹನ್ ರಾಣಾ, ಕೆ ನಿತೀಶ್ ರೆಡ್ಡಿ, ಹಾರ್ದಿಕ್ ತಮೋರ್, ಮಿಹಿರ್ ಹಿರ್ವಾನಿ, ಸಾಯಿರಾಜ್ ಪಾಟೀಲ್, ಮೋನು ಸಿಂಗ್ ಹೆಸರನ್ನು ಹರಾಜು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಎಲ್ಲಾ ಆಟಗಾರರ ಮೂಲಬೆಲೆ 20 ಲಕ್ಷ ರೂ. ಆಗಿರಲಿದೆ.
ಇದನ್ನೂ ಓದಿ:ವಾರ್ನರ್ ಟು ರಬಾಡ: ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ ಆಟಗಾರರು
ಬೆಂಗಳೂರಿನಲ್ಲಿ ಫೆ.12 ಮತ್ತು 13ರಂದು ಮೆಗಾ ಹರಾಜು ನಡೆಯಲಿದೆ. ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡಾ, ಕ್ವಿಂಟನ್ ಡಿಕಾಕ್, ಪ್ಯಾಟ್ ಕಮಿನ್ಸ್, ಮಿಚ್ ಮಾರ್ಶ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಮುಂತಾದವರು ಹರಾಜಿನಲ್ಲಿ ಮಿಂಚುವ ಸಾಧ್ಯೆತೆಯಿದೆ.
ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಭಾರತೀಯ ಅಂಡರ್ 19 ಆಟಗಾರರೂ ಹರಾಜು ಪಟ್ಟಿಯಲ್ಲಿ ಹೆಸರು ನಮೂದಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಮೆಗಾ ಹರಾಜು: ಈ ಐದು ಆಟಗಾರರ ಮೇಲೆ ಕಣ್ಣಟ್ಟಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು