Advertisement

ಏಕತಾ ಪ್ರತಿಮೆ ಪ್ರವೇಶ ಶುಲ್ಕ ಸಂಗ್ರಹಿಸುವ ಸಿಬ್ಬಂದಿಯಿಂದ 5.24 ಕೋಟಿ ರೂ. ವಂಚನೆ

05:10 PM Dec 02, 2020 | sudhir |

ಅಹಮದಾಬಾದ್‌: ಗುಜರಾತ್‌ನ ಏಕತಾ ಪ್ರತಿಮೆಯ ಪ್ರವೇಶ ಶುಲ್ಕ ನಿರ್ವಹಿಸುವ ಸಂಸ್ಥೆಯ ಸಿಬ್ಬಂದಿ 5.24 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

ವಡೋದರಾದಲ್ಲಿರುವ ಖಾಸಗಿ ಬ್ಯಾಂಕ್‌ನ ಮೂಲಕ ಮತ್ತೂಂದು ಸಂಸ್ಥೆಗೆ ಕೇವಡಿಯಾದಲ್ಲಿರುವ ಏಕತಾ ಪ್ರತಿಮೆಯ ಪ್ರವೇಶ ಶುಲ್ಕ ಸಂಗ್ರಹಿಸುವ ಹೊಣೆಯನ್ನು ನೀಡಲಾಗಿತ್ತು. 2018ರ ಅಕ್ಟೋಬರ್‌ನಿಂದ ಅದು ಜಗತ್ತಿನಾದ್ಯಂತದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಣ ಸಂಗ್ರಹಿಸಲು ನೇಮಕಗೊಂಡಿದ್ದ ಸಂಸ್ಥೆಯ ಕೆಲವರು 5,24,77,375 ರೂ.ಗಳನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ಕೇವಡಿಯಾ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ ಎಂದು ಡಿವೈಎಸ್‌ಪಿ ವಾಣಿ ದುಹಾಟ್‌ ಬುಧವಾರ ತಿಳಿಸಿದ್ದಾರೆ.

ಇದನ್ನೂ ಓದಿ:ನ್ಯಾಯಾಧೀಶರುಗಳ ಪತ್ನಿಯರ ವಿರುದ್ಧ ಅಶ್ಲೀಲ ಹೇಳಿಕೆ; ನಿವೃತ್ತ ಜಡ್ಜ್ ಕರ್ಣನ್ ಬಂಧನ

ಏಕತಾ ಪ್ರತಿಮೆಯ ಆಡಳಿತ ಮಂಡಳಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅದೇನಿದ್ದರೂ ಬ್ಯಾಂಕ್‌ ಮತ್ತು ಖಾಸಗಿ ಸಂಸ್ಥೆಯ ನಡುವಿನ ವಿಚಾರ. ನಮಗೆ ಸಂದಾಯವಾಗಬೇಕಾಗಿರುವ ಮೊತ್ತವನ್ನು ಬ್ಯಾಂಕ್‌ ಈಗಾಗಲೇ ನೀಡಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next