Advertisement

ಮಹಾ ಡಿಸಿಎಂ ಪವಾರ್‌ಗೆ ಸೇರಿದ 1 ಸಾವಿರ ಕೋಟಿ ರೂ.ಆಸ್ತಿ ಜಪ್ತಿ

07:00 PM Nov 02, 2021 | Team Udayavani |

ಮುಂಬೈ: ಮಹಾರಾಷ್ಟ್ರದ ಡಿಸಿಎಂ, ಎನ್‌ಸಿಪಿಯ ಹಿರಿಯ ಮುಖಂಡ ಅಜಿತ್‌ ಪವಾರ್‌ ಅವರ ಕುಟುಂಬ ಸದಸ್ಯರಿಗೆ ಸೇರಿದ 1 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.

Advertisement

ಆದಾಯ ತೆರಿಗೆ ಈ ಕ್ರಮ ಕೈಗೊಂಡಿದೆ. ನವದೆಹಲಿಯ ಪ್ರಮುಖ ಸ್ಥಳವೊಂದರಲ್ಲಿರುವ ಫ್ಲ್ಯಾಟ್‌, ಮಹಾರಾಷ್ಟ್ರದ ಸತಾರಾದಲ್ಲಿರುವ ಜರಂದೇಶ್ವರ್‌ ಸಹಕಾರಿ ಸಕ್ಕರೆ ಕಾರ್ಖಾನೆ, ಗೋವಾದಲ್ಲಿರುವ ವಿಲಾಸಿ ರೆಸಾರ್ಟ್‌ ಅನ್ನು ಬೇನಾಮಿ ಆಸ್ತಿ ಕಾಯ್ದೆ 1988ರ ಅನ್ವಯ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅ.7ರಂದು ನಡೆದಿದ್ದ ಶೋಧ ಕಾರ್ಯಾಚರಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಅಜಿತ್‌ ಪವಾರ್‌ ಅವರ ಪುತ್ರ ಪಾರ್ಥ ಪವಾರ್‌ ಅವರಿಗೆ ಸೇರಿದ ಕೆಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಅ.15ರಂದು ತೆರಿಗೆ ಇಲಾಖೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ 184 ಕೋಟಿ ರೂ. ಮೌಲ್ಯದ ದಾಖಲೆಗಳು ಇಲ್ಲದ ಆದಾಯ ಪತ್ತೆಯಾಗಿತ್ತು ಎಂದು ಉಲ್ಲೇಖೀಸಲಾಗಿತ್ತು.

ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಅಜಿತ್‌ ಪವಾರ್‌ ಹೊಂದಿರುವ ಕಚೇರಿಗಳು, ಸಂಸ್ಥೆಗಳಿಗೆ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಎರಡು ಪ್ರಮುಖ ಕಂಪನಿಗಳು ಹೂಡಿಕೆ ಮಾಡಿದ್ದವು ಎಂದು ತೆರಿಗೆ ಇಲಾಖೆ ಕಂಡುಕೊಂಡಿತ್ತು. ನಕಲಿ ಷೇರುಗಳು, ದಾಖಲೆಗಳು ಮತ್ತು ಸುರಕ್ಷಿತವಲ್ಲದ ಸಾಲಗಳು, ಕೆಲವೊಂದು ಸೇವೆಗಳ ಹೆಸರಿನಲ್ಲಿ ಮುಂಗಡ ಮೊತ್ತ ಪಾವತಿ ಸೇರಿದಂತೆ ಹಲವು ನಿಯಮ ಮೀರಿದ ದಾರಿಗಳ ಮೂಲಕ ಹೂಡಿಕೆ ಮಾಡಲಾಗಿದೆ ಮತ್ತು ರಾಜ್ಯದ ಪ್ರಮುಖ ರಾಜಕೀಯ ಕುಟುಂಬಕ್ಕೆ ಸೇರಿದ್ದ ವಹಿವಾಟು ಇದಾಗಿದೆ ಎಂದು ದೃಢಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next