Advertisement

ಸ್ವಯಂ ಸೀಲ್‌ಡೌನ್‌ಗೆ ಮುಂದಾದ ಸ್ಥಳೀಯರು

09:17 PM May 15, 2021 | Team Udayavani |

ಕುಷ್ಟಗಿ: ಕೊರೊನಾ ಸೋಂಕಿನ ಸರಪಳಿ ಕತ್ತರಿಸಲು, ಪಟ್ಟಣ ಸೀಲ್‌ಡೌನ್‌ಗೆ ತಾಲೂಕಾಡಳಿತ ಮೀನಮೇಷ ಮಾಡಿದ ಹಿನ್ನೆಲೆಯಲ್ಲಿ ಮೂರು ವಾರ್ಡ್‌ಗಳ ವ್ಯಾಪ್ತಿಯ ತೆಗ್ಗಿನ ಓಣಿಯ ಸ್ಥಳೀಯರೇ ಸೀಲ್‌ಡೌನ್‌ ಮಾಡಲು ಮುಂದಾಗಿದ್ದಾರೆ.

Advertisement

ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಿದ್ದು, ನಿತ್ಯ ಸಾವಿನ ಪ್ರಕರಣಗಳ ಭಯ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್‌ಡೌನ್‌ ಪುರಸಭೆ ಒಮ್ಮತಾಭಿಪ್ರಾಯಕ್ಕೆ ಪುರಸಭೆ ಸದಸ್ಯರಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕುಷ್ಟಗಿ ಪಟ್ಟಣ ಸೀಲ್‌ಡೌನ್‌ ಜಿಲ್ಲಾ ಧಿಕಾರಿಗಳು ಕ್ರಮವಹಿಸಬೇಕಿರುವ ಹಿನ್ನೆಲೆಯಲ್ಲಿ ಕುಷ್ಟಗಿ ತಹಶೀಲ್ದಾರ್‌ ಜಿಲ್ಲಾ ಧಿಕಾರಿಗಳ ಅನುಮತಿ ಪಡೆದು ಮುಂದಿನ ಕ್ರಮದ ಬಗ್ಗೆ ಪುರಸಭೆ ತುರ್ತುಸಭೆಯಲ್ಲಿ ಪ್ರಸ್ತಾಪಿಸಿದ್ದರಲ್ಲದೇ ಎರಡು ದಿನಗಳ ಕಾಲವಕಾಶ ಹಿಡಿಯಲಿದೆ ಎಂದಿದ್ದರು.

ನಂತರ ತಹಶೀಲ್ದಾರ್‌ ಎಂ.ಸಿದ್ದೇಶ ಅವರು, ಸರ್ಕರದ ಮಾರ್ಗಸೂಚಿ ಪ್ರಕಾರ ಸೀಲ್‌ಡೌನ್‌ ಬದಲಿಗೆ, ಜಾರಿಯಲ್ಲಿರುವ ಲಾಕ್‌ಡೌನ್‌ ಮಾರ್ಗಸೂಚಿ ಮುಂದುವರೆಯಲಿದೆ ಎಂದು ತಿಳಿಸಿ, ಸೀಲ್‌ಡೌನ್‌ ಪ್ರಸ್ತಾಪಕ್ಕೆ ಪೂರ್ಣವಿರಾಮ ಹಾಕಿದ್ದರು. ಪಟ್ಟಣದಲ್ಲಿ ನಿತ್ಯ ಕೊರೊನಾ ಸೋಂಕು ಪ್ರಕರಣಗಳು ದೃಢವಾಗಿರುವುದು ಒಂದೆಡೆಯಾದರೆ, ದಿನವೂ ಸಾವಿನ ಪ್ರಕರಣಗಳು ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದವು. ಇದಕ್ಕೆ ಕಡಿವಾಣ ಹಾಕಲು ಇನ್ನಷ್ಟು ಕಠಿಣ ನಿಯಮಗಳ ಸೀಲ್‌ಡೌನ್‌ನಿಂದ ಮಾತ್ರ ಸಾಧ್ಯ ಎಂದು ಮನಗಂಡಿರುವ ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಅವರು, ತಾವು ಪ್ರತಿನಿಧಿ ಸಿದ 21ನೇ ವಾರ್ಡ್‌, ಮಹಿಬೂಬಸಾಬ್‌ ಕಮ್ಮಾರ ಪ್ರತಿನಿ ಧಿಸಿರುವ 22ನೇ ವಾರ್ಡ್‌, 23ನೇ ವಾರ್ಡ್‌ ಮಹಾಂತೇಶ ಕಲ್ಲಭಾವಿ ಪ್ರತಿನಿ ಧಿಸಿರುವ 23ನೇ ವಾರ್ಡ್‌ ವ್ಯಾಪ್ತಿಯ ತೆಗ್ಗಿನ ಓಣಿ ಸಂಪೂರ್ಣವಾಗಿ ಸ್ವಯಂ ಪ್ರೇರಿತ ಸೀಲ್‌ಡೌನ್‌ ಮಾಡಲು ನಿರ್ಧರಿಸಿ, ತೆಗ್ಗಿನ ಓಣಿ ಸಂಪರ್ಕಿಸುವ ಎಲ್ಲ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿ ನಿರ್ಬಂಧಿ  ಸಲಾಗಿದೆ.

ಈ ತೆಗ್ಗಿನ ಓಣಿಗೆ ಬೈಕ್‌ ಹಾಗೂ ವಾಹನ ಸಂಚಾರ ನಿಯಂತ್ರಿಸಲಾಗಿದ್ದು, ಹೊರಗಿನವರು ಯಾರು ಬರುವಂತಿಲ್ಲ. ಸ್ಥಳೀಯರು ಮಾತ್ರ ದೈನಂದಿನ ಅಗತ್ಯ ವಸ್ತುಗಳಿಗೆ ಕಾಲ್ನಡಿಗೆಯಲ್ಲಿ ಮಾಸ್ಕ್ ಧರಿಸಿ ಹೋಗಿ ಬರಬೇಕು. ಅನಗತ್ಯ ಗುಂಪಾಗುವುದು ನಿರ್ಬಂಧಿ ಸಿ ಮನೆಯಲ್ಲಿ ಇರಲು ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next