Advertisement

ಶಿಕ್ಷಣದಿಂದ ಮಹಿಳೆಯರ ಅಭಿವೃದ್ಧಿ: ಪಾರ್ವತಮ್ಮ

05:19 PM Apr 05, 2019 | Team Udayavani |

ಎನ್‌.ಆರ್‌.ಪುರ: ಮಹಿಳೆಯರ ಅಭಿವೃದ್ಧಿಗೆ ಶಿಕ್ಷಣ ಅತೀ ಮುಖ್ಯ ಎಂದು ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಕೆ.ಟಿ.ಪಾರ್ವತಮ್ಮ ಹೇಳಿದರು. ಇಲ್ಲಿನ ಸಹರಾ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 22ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ
ಅವರು ಮಾತನಾಡಿದರು.

Advertisement

ಇಂದು ಪುರುಷ, ಮಹಿಳೆ ಇಬ್ಬರೂ ವಿದ್ಯುನ್ಮಾನ ಯಂತ್ರಗಳನ್ನು ಸರಿಸಮಾನವಾಗಿ ಬಳಸುತ್ತಿದ್ದಾರೆ. ಹೆಣ್ಣನ್ನು ಸಮಾಜದ ಕಟ್ಟುಪಾಡುಗಳಿಗೆ ಕಟ್ಟಿ ಹಾಕದೆ ಸ್ವತಂತ್ರ್ಯವಾಗಿ ಬದುಕಲು ಪೋಷಕರು ಬಿಡಬೇಕು. ರಾಷ್ಟ್ರೀಯ ಅನನ್ಯತೆ ಕೊಡಬೇಕು. ಸಮಾಜ ಸಾಮಾಜಿಕವಾಗಿ ಆರೋಗ್ಯಕರವಾಗಿರಲು ಹೆಣ್ಣನ್ನು ಸಮಾನವಾಗಿ ಬೆಳೆಸಬೇಕು ಎಂದರು.

ಮಹಿಳೆಯರಲ್ಲಿ ತಮ್ಮ ಆಂತರಿಕ ಬೌದ್ಧಿಕ ಸಾಮರ್ಥ್ಯವಿದ್ದು, ಉನ್ನತ ಶಿಕ್ಷಣ ಹೊಂದಿದರೆ ವೈಚಾರಿಕವಾಗಿ ಬೆಳೆದರೆ ಮಾತ್ರ ಇಂದು ಬದಲಾವಣೆಗಳು ಸಾಧ್ಯ. ಹೆಣ್ಣು ಶೋಷಣೆಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಕೆ.ಸಿ. ದ್ರಾಕ್ಷಾಯಿಣಿ, ಇಂದು ಮಹಿಳೆಯರು ಕ್ರಿಯಾಶೀಲರಾಗಿದ್ದಾರೆ. ಖಾಲಿತನದ ಭಾವನೆ ಮಹಿಳೆಯರನ್ನು ಕಾಡುತ್ತಿದೆ. ಆದ್ಯತೆ ಇಲ್ಲದ, ಪ್ರತಿಫಲವಿಲ್ಲದ ಕ್ಷೇತ್ರ ಗೃಹಿಣಿಯದ್ದಾಗಿದೆ. ಹಿಂದೆ ಪುರುಷರ
ಜೇಬುಗಳೇ ಮಹಿಳೆಯರ ಬ್ಯಾಂಕಾಗಿತ್ತು. ಈ ಎಲ್ಲಾ ಪರಿಸ್ಥಿತಿಗಳನ್ನು ಮಹಿಳೆ ಇಂದು ಮೀರಿ ಬಂದಿದ್ದಾಳೆ. ಪ್ರಸ್ತುತ ದಿನಗಳಲ್ಲಿ ವಿದ್ಯೆ ಎಂಬ ಮಾನದಂಡದಿಂದ ಮಹಿಳೆಯರ ಸ್ಥಾನಮಾನ ಬದಲಾಗಿದೆ. ಸಾಂಸಾರಿಕ ಜಗತ್ತಿನಿಂದ ಇಂದು ಮಹಿಳೆಯರು ವ್ಯಾವಹಾರಿಕ ಜಗತ್ತಿಗೆ ಕಾಲಿಟ್ಟಿದ್ದಾಳೆ ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ವೇತಾ ರಾಜೇಂದ್ರ ಮಾತನಾಡಿ, ನಮ್ಮ ಶಾಶ್ವತ ಮಹಿಳಾ ಒಕ್ಕಲಿಗರ ಸಂಘವು ಅನೇಕ ಏಳು ಬೀಳುಗಳ ನಡುವೆ 22 ವರ್ಷಗಳ ಕಾಲದ ಸುದೀರ್ಘ‌ ಪಯಣದತ್ತ ಸಾಗಿದೆ. ಇದಕ್ಕೆ ಸಂಘದ ಎಲ್ಲ ಪದಾ ಧಿಕಾರಿಗಳ ಶ್ರಮ ಮಹತ್ವದ್ದಾಗಿದೆ ಎಂದರು.

Advertisement

ಸಂಘದ ಕಾರ್ಯದರ್ಶಿ ಭವಾನಿ ಶಿವಾನಂದ್‌ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಮಾರಂಭದಲ್ಲಿ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ವಿವಿಧ ಕ್ರೀಡಾಕೂಟಗಳಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಖಜಾಂಚಿ ಸವಿತಾ ರತ್ನಾಕರ್‌, ಚೈತ್ರಾ ರಮೇಶ್‌, ಲೇಖಾ ವಸಂತ್‌, ವಸಂತ ದಿವಾಕರ್‌
ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next