Advertisement
ನಗರವನ್ನು ಸ್ವಚ್ಛ ಮಂಗಳೂರು ಮಾಡಬೇಕು ಎಂದು ಮನಪಾ ಸಹಿತ ಇನ್ನಿತರ ಸಂಘಟನೆಗಳು ಹಲವು ವರ್ಷ ಗಳಿಂದ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಕಿಂಚಿತ್ತು ಕೊಡುಗೆ ನೀಡಬೇಕು ಎಂಬ ದೃಷ್ಟಿಯಿಂದ ‘ಸ್ವಚ್ಛ ಯೋಧರು’ ಎಂಬ ವಾಟ್ಸಪ್ ಗ್ರೂಪ್ ರಚನೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಗ್ರೂಪ್‌ನಲ್ಲಿ ಈಗಾಗಲೇ 70ಕ್ಕೂ ಮಿಕ್ಕಿ ಸದಸ್ಯರಿದ್ದು, ಸಾರ್ವಜನಿಕರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ ಗ್ರೂಪ್ ಸದಸ್ಯರು ಕಾವಲು ಕಾಯುತ್ತಾರೆ. ಕಸ ಹಾಕುವ ಸಮಯದಲ್ಲಿ ಅವರಿಗೆ ತಿಳಿ ಹೇಳಲಾಗುತ್ತದೆ. ಕೆಲವು ಬಾರಿ ಕಣ್ತಪ್ಪಿಸಿ ಕಸ ಹಾಕಿದರೆ, ಆ ಕಸದ ರಾಶಿಯಲ್ಲೇ ಕೆಲವೊಂದು ದಾಖಲೆಗಳ ಝೆರಾಕ್ಸ್ ಪ್ರತಿ, ಚೀಟಿಗಳು ಸಹಿ ತ ಇನ್ನಿತರ ಮಾಹಿತಿಗಳಿದ್ದರೆ ಇದೇ ಆಧಾರದ ಮೇಲೆ ಆ ಮನೆಯನ್ನು ಸಂಪರ್ಕಿಸಿ ಅವರ ಮನೆಗೆ ಕಸ ತಲುಪಿಸುತ್ತಾರೆ.
ಸ್ವಚ್ಛತೆಯ ಫಾಲೋಆಪ್ ಕೆಲಸಕ್ಕೆ ವಿವಿಧ ಕ್ಷೇತ್ರಗಳಲ್ಲಿ ನಿವೃತ್ತಿ ಹೊಂದಿದ ವ್ಯಕ್ತಿಗಳು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಬ್ಲ್ಯಾಕ್ ಸ್ಪಾಟ್ ಸಹಿತ ಸಾರ್ವಜನಿಕರು ಹೆಚ್ಚಾಗಿ ಕಸ ಬಿಸಾಕುವಂತಹ ಜಾಗಗಳಲ್ಲಿ ಸ್ವಚ್ಛ ಮಂಗಳೂರು ಕಾರ್ಯಕರ್ತರಲ್ಲದೆ ನಿವೃತ್ತರು ಕೂಡ ಕಾವಲು ಕಾಯುತ್ತಾರೆ.
Related Articles
ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಲು ಈ ಅಭಿಯಾನ ಪ್ರಾರಂಭಿಸಲಾಗಿದೆ. ವಾರದಲ್ಲಿ ಒಂದು ಬಾರಿ ಶ್ರಮದಾನ ನಡೆದ ಬಳಿಕ ಮುಂದಿನ ಒಂದು ವಾರಗಳ ಕಾಲ ಫಾಲೋಅಪ್ ಗಾಗಿ ಸ್ವಚ್ಛ ಯೋಧರು ಎಂಬ ವಾಟ್ಸಪ್ ಗ್ರೂಪ್ ರಚಿಸಿದ್ದೇವೆ.
– ಸುಧೀರ್ ನೊರೊನ್ಹಾ,
ಸ್ವಚ್ಛ ಮಂಗಳೂರು ಅಭಿಯಾನ
ಕಾರ್ಯಕರ್ತ
Advertisement
ಕಾರ್ಯಕರ್ತರ ಬೆಂಬಲರಾಮಕೃಷ್ಣ ಮಿಷನ್ ಸ್ವಚ್ಛತಾ ಆಂದೋಲನದ ಯುವಕರು ಸ್ವಚ್ಛಯೋಧರು ಎಂಬ ಗ್ರೂಪ್ ಮುಖೇನ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ನಗರ ಸ್ವಚ್ಛವಾಗುತ್ತಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಕಸದ ಬ್ಲ್ಯಾಕ್ ಸ್ಪಾರ್ಟ್‌ಗಳ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕರು, ಕಾರ್ಯಕರ್ತರ ಬೆಂಬಲವೂ ಇದಕ್ಕೆ ಕಾರಣ.
– ಏಕಗಮ್ಯಾನಂದ ಸ್ವಾಮೀಜಿ,
ಸ್ವಚ್ಛತಾ ಅಭಿ ಯಾನ ಸಂಚಾಲಕ,
ರಾಮಕೃಷ್ಣ ಮಠ ಮಂಗಳೂರು ಸ್ವಚ್ಛತೆಗೆ ಅ. 2ರ ಗುರಿ
ಅಕ್ಟೋಬರ್ 2ರ ವೇಳೆಗೆ ನಗರದ ಯಾವುದೇ ಪ್ರದೇಶದಲ್ಲಿ ಕಸ ಇರಬಾರದು ಎಂಬ ಗುರಿಯನ್ನು ರಾಮಕೃಷ್ಣ ಮಿಷನ್ ಈಗಾಗಲೇಇಟ್ಟುಕೊಂಡಿದೆ. ವಾರದಲ್ಲಿ ನಗರದ ಎರಡು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಯೋಜನೆಯನ್ನು ಮಠದ ಸ್ವತ್ಛತಾ ತಂಡ ನಿರ್ವಹಿಸುತ್ತಿದ್ದು, ಈಗಾಗಲೇ ಮನೆ ಮನೆಗಳಿಗೆ ಕರಪತ್ರಗಳ ಮೂಲಕ ಕಸ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನವೀನ್ ಭಟ್ ಇಳಂತಿಲ