Advertisement

ಮೋದಿ ನಾಮಬಲದಿಂದ ಬಿಜೆಪಿಗೆ ಗೆಲುವು ಖಚಿತ

04:08 PM Apr 22, 2019 | Team Udayavani |

ಚಳ್ಳಕೆರೆ: ಲೋಕಸಭಾ ಚುನಾವಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಚಿಂತನ ಮಂಥನ ಸಭೆ ನಡೆಯಿತು.

Advertisement

ಪಕ್ಷದ ಮಂಡಲಾಧ್ಯಕ್ಷ ಬಿ.ವಿ. ಸಿರಿಯಣ್ಣ ಮಾತನಾಡಿ, 2014ರ ಲೋಕಸಭಾ ಚುನಾವಣೆಗಿಂತ 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ಸೂಚನೆಗಳು ಕಂಡು ಬಂದಿವೆ. ಪಕ್ಷದ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ನಿಗದಿ ಪಡಿಸಿದ ಬೂತ್‌ಗಳಲ್ಲಿ ಕಾರ್ಯನಿರ್ವಹಿಸಿ ಎಲ್ಲೆಡೆ ಪಕ್ಷಕ್ಕೆ ಹೆಚ್ಚು ಮತಗಳು ಲಭ್ಯವಾಗುವಂತೆ ಪ್ರಯತ್ನ ಮಾಡಿದ್ದಾರೆ. ಈ ಬಾರಿಯ ಚುನಾವಣಾ ಗೆಲುವಿಗೆ ಮೋದಿಯವರ ನಾಮಬಲವೇ ಪ್ರಮುಖ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಮೊದಲ ಬಾರಿ ಪಕ್ಷದ ಅಭ್ಯರ್ಥಿಯಾಗಿರುವ ವಜಿ ಸಚಿವ ಎ. ನಾರಾಯಣಸ್ವಾಮಿಯವರು ಕ್ಷೇತ್ರಕ್ಕೆ ಎರಡು ಬಾರಿ ಭೇಟಿ ನೀಡಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದರು. ಏ. 9ರಂದು ನಡೆದ ಪ್ರಧಾನಮಂತ್ರಿಯವರ ವಿಜಯ ಸಂಕಲ್ಪ ಯಾತ್ರೆ ಕೂಡ ಭಾರತೀಯ ಜನತಾ ಪಕ್ಷದ ಗೆಲುವನ್ನು ಧೃಢಪಡಿಸಿತ್ತು. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಗೆಲುವು ಸಾಧಿಸಲಿದ್ದು, ಪಕ್ಷದ ಗೆಲುವಿಗೆ ಕಾರ್ಯನಿರ್ವಹಿಸಿದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಬಲವರ್ಧನೆ ಮತ್ತು ಸಂಘಟನೆಗೆ ಪಕ್ಷದ ವರಿಷ್ಠರ ನಿರ್ದೇಶನದಂತೆ ಕಾರ್ಯನಿರ್ವಹಿಸಿದ ಸಂತೋಷ್‌ ಭಟ್ಕಳ್‌ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್‌ ಭಟ್ಕಳ್‌, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಯಲ್ಲಿ ಅನೇಕ ಹಿರಿಯರು ಹಾಗೂ ಅನುಭವವುಳ್ಳ ಕಾರ್ಯಕರ್ತರು ಪಡೆ ಇದೆ. ಪಕ್ಷವನ್ನು ಮುನ್ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಯಾವ ವ್ಯಕ್ತಿ ಪಕ್ಷದ ಉನ್ನತಿಗಾಗಿ ಶ್ರಮಿಸುತ್ತಾನೋ ಆತ ಪಕ್ಷದ ಆಸ್ತಿಯಾಗಿ ಉಳಿಯುತ್ತಾನೆ. ಕಾರ್ಯಕರ್ತರ ಶ್ರಮ ಹಾಗೂ ತನ್ನದೇಯಾದ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಬಿಜೆಪಿ ದೇಶದಲ್ಲಿ ಬಲವಾಗಿ ನೆಲೆ ನಿಂತಿದೆ ಎಂದು ಹೇಳಿದರು.

ಚಿಂತನ ಮಂಥನ ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಂ.ಎಸ್‌. ಜಯರಾಮ್‌, ಟಿ.ಬೋರನಾಯಕ, ಶಿವಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ, ಹೊಟ್ಟೆಪ್ಪನಹಳ್ಳಿ ಮಂಜುನಾಥ, ಕಾಟಪ್ಪನಹಟ್ಟಿ ವೀರೇಶ್‌, ಇ.ಎನ್‌. ವೆಂಕಟೇಶ್‌, ಜಿ.ಕೆ. ವೀರಣ್ಣ, ಚಿದಾನಂದ, ಎಸ್‌. ಯಲ್ಲಪ್ಪ, ದಿನೇಶ್‌ ರೆಡ್ಡಿ, ಎ. ವಿಜಯೇಂದ್ರ, ಡಿ.ಕೆ. ಸೋಮಶೇಖರ ಮೊದಲಾದವರು ಭಾಗವಹಿಸಿದ್ದರು.

Advertisement

ಯಾವ ವ್ಯಕ್ತಿ ಪಕ್ಷದ ಉನ್ನತಿಗಾಗಿ ಶ್ರಮಿಸುತ್ತಾನೋ ಆತ ಪಕ್ಷದ ಆಸ್ತಿಯಾಗಿ ಉಳಿಯುತ್ತಾನೆ. ಕಾರ್ಯಕರ್ತರ ಶ್ರಮ ಹಾಗೂ ತನ್ನದೇಯಾದ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಬಿಜೆಪಿ ದೇಶದಲ್ಲಿ ಬಲವಾಗಿ ನೆಲೆ ನಿಂತಿದೆ.
ಸಂತೋಷ್‌ ಭಟ್ಕಳ್‌,
 ಬಿಜೆಪಿ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next