ಗೋಕಾಕ: ತಾಲೂಕಿನ 32 ಗ್ರಾಪಂಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಶಾಂತ ರೀತಿಯಿಂದ ಜರುಗಿದೆ. ಸರಕಾರಿ ಪಿಯು ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ 12 ಕೊಠಡಿಗಳಲ್ಲಿ 50ಕ್ಕೂ ಹೆಚ್ಚು ಟೇಬಲ್‌ಗಳಲ್ಲಿ ಮತಗಳ ಎಣಿಕೆ ಪ್ರಾರಂಭವಾಯಿತು.
ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಗುಲಾಲು ಎರಚಿ, ಪಟಾಕ್ಷಿ ಸಿಡಿಸಿ, ಸಿಹಿ ಹಂಚುತ್ತ ವಿಜಯೋತ್ಸವ ಆಚರಿಸುತ್ತ ತಮ್ಮ ಗ್ರಾಮಗಳಿಗೆ ಹಿಂತಿರುಗುವ ದೃಶ್ಯ ಸಾಮಾನ್ಯವಾಗಿತ್ತು. ಕಾಲೇಜು ಪಕ್ಕದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣ ತಾಲೂಕಿನ ವಿವಿಧೆಡೆಯಿಂದ ಬಂದ ಸಾವಿರಾರು ಜನರಿಂದ ತುಂಬಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.
ಇದನ್ನೂ ಓದಿ:ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಅಧಿಕ
ಬಾರದ ಅಂಚೆ ಮತ
ಗ್ರಾಪಂ ಚುನಾವಣೆ ಅಂಗವಾಗಿ ಬರಬೇಕಾಗಿದ್ದ ಅಂಚೆ ಮತಗಳು ಬಾರದ್ದರಿಂದ ಅಭ್ಯರ್ಥಿಗಳಿಗೆ ನಿರಾಸೆಯಾಯಿತು. ತಾಲೂಕಿನ ಎಲ್ಲ ಪಂಚಾಯತಿಗಳಲ್ಲಿ ಇದ್ದ 1313 ಮತಪತ್ರಗಳಲ್ಲಿ (ಸರ್ವೀಸ್ ವೋಟರ್) ಒಂದೂ ಮತಪತ್ರ ಮರಳಿ ಬಂದಿಲ್ಲ. ಇವೆಲ್ಲ ಮತಗಳು ಸೇನೆಯ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ತಾಲೂಕಿನ ಸಿಬ್ಬಂದಿಗೆ ಕಳಿಸಲಾಗಿತ್ತು. ಆದರೆ ಅವುಗಳು ಮರಳಿ ಬರಲಿಲ್ಲ.