Advertisement

ಮೇಯರ್‌ ಚುನಾವಣೆಗೆ ಮುಹೂರ್ತ

02:49 PM Nov 07, 2021 | Team Udayavani |

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆನಡೆದು, ಫಲಿತಾಂಶ ಹೊರಬಿದ್ದು ಅರ್ಧವರ್ಷಕಳೆದರೂ ನಡೆಯದ ಮೇಯರ್‌-ಉಪಮೇಯರ್‌ಚುನಾವಣೆಗೆ ಕೊನೆಗೂ ಮುಹೂರ್ತ μಕ್ಸ್‌ ಆಗಿದ್ದು,ಇದೇ ನ.18 ರಂದು ಚುನಾವಣೆ ನಡೆಸಲು ಕಲುºರ್ಗಿಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Advertisement

ಆಯುಕ್ತರ ಆದೇಶದ ಮೇರೆಗೆಕಾರ್ಯಪ್ರವೃತ್ತರಾಗಿರುವ ಜಿಲ್ಲಾ ಧಿಕಾರಿ, ಜಿಲ್ಲಾಚುನಾವಣಾ ಧಿಕಾರಿ ಪವನ್‌ಕುಮಾರ್‌ ಮಾಲಪಾಟಿ,ಪಾಲಿಕೆಯ 39 ಸದಸ್ಯರಿಗೂ ನೋಟಿಸ್‌ ರವಾನಿಸಿದ್ದುನ.18 ರಂದು ಮಧ್ಯಾಹ್ನ 12.30ಕ್ಕೆ ಮೇಯರ್‌-ಉಪಮೇಯರ್‌ ಚುನಾವಣೆ ನಡೆಯಲಿದೆ. ಪಾಲಿಕೆಮೇಯರ್‌ ಸ್ಥಾನ ಸಾಮಾನ್ಯಕ್ಕೆ, ಉಪಮೇಯರ್‌ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆಎಂದು ಚುನಾವಣಾಧಿ ಕಾರಿ ನೋಟೀಸ್‌ನಲ್ಲಿ ತಿಳಿಸಿದ್ದಾರೆ.

ಚುನಾವಣೆ ನಿಗದಿಯಾದ ನ.18 ರಂದುಬೆಳಗ್ಗೆಯಿಂದಲೇ ಚುನಾವಣೆ ನಡೆಯುವಪ್ರದೇಶದಲ್ಲಿ 144 ನೇ ಸೆಕ್ಷನ್‌ ಜಾರಿಯಲ್ಲಿರಲಿದೆ.ಪಾಲಿಕೆ ಸದಸ್ಯರು, ಮತದಾನದ ಹಕ್ಕು ಉಳ್ಳವರನ್ನುಹೊರತುಪಡಿಸಿ ಉಳಿದಂತೆ ಇತರರು ಗುಂಪುಗುಂಪಾಗಿ ಬರುವಂತಿಲ್ಲ ಎಂದು ಎಚ್ಚರಿಸಿದ್ದಾರೆ.ಬಳ್ಳಾರಿ ಮಹಾನಗರ ಪಾಲಿಕೆಗೆ ಮೇ 28ರಂದು ಚುನಾವಣೆ ನಡೆದಿದ್ದು, ಮೇ 31 ರಂದುಫಲಿತಾಂಶ ಹೊರಬಿದ್ದಿತ್ತು.

ಸುಮಾರು 7 ತಿಂಗಳುಬಳಿಕ ಮೇಯರ್‌, ಉಪಮೇಯರ್‌ ಚುನಾವಣೆನಡೆಯುತ್ತಿರುವುದು ವಿಶೇಷ. ಕೋವಿಡ್‌ ನೆಪವೊಡ್ಡಿಅ ಧಿಕಾರದಲ್ಲಿರುವ ಬಿಜೆಪಿಯವರು ಮೇಯರ್‌-ಉಪಮೇಯರ್‌ ಚುನಾವಣೆ ಮುಂದೂಡುತ್ತಿದ್ದಾರೆಎಂದು ಕಾಂಗ್ರೆಸ್‌ನವರು ಆರೋಪಿಸಿದ್ದರು.ತಡವಾದರೂ, ಕೊನೆಗೂ ಚುನಾವಣೆ ನಿಗದಿಯಾದಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ನಿಟ್ಟುಸಿರುಬಿಟ್ಟಿದ್ದಾರೆ.

ರಾಜಕೀಯ ಚಟುವಟಿಕೆ ಬಿರುಸು: ಕಳೆದ ಐದಾರುತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಪಾಲಿಕೆಮೇಯರ್‌-ಉಪಮೇಯರ್‌ ಚುನಾವಣೆಗೆಕೊನೆಗೂ ನ.18ಕ್ಕೆ ಮುಹೂರ್ತ μಕ್ಸ್‌ ಆಗಿದ್ದು,ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಪಡೆದುಕೊಂಡಿದೆ.ಬಳ್ಳಾರಿ ಮಹಾನಗರ ಪಾಲಿಕೆಯ 39 ಸದಸ್ಯಸ್ಥಾನಗಳಲ್ಲಿ ಕಾಂಗ್ರೆಸ್‌ 21, ಬಿಜೆಪಿ 13, ಐವರುಪಕ್ಷೇತರರು ಜಯಗಳಿಸಿದ್ದಾರೆ. ಅತ್ಯಧಿ ಕ ವಾಡ್‌ìಗಳಲ್ಲಿ ಗೆಲ್ಲುವ ಮೂಲಕ ಬಹುಮತ ಸಾ ಧಿಸಿ,ಸತತ ಎರಡನೇ ಬಾರಿಗೆ ಪಾಲಿಕೆಯಲ್ಲಿ ಅ ಧಿಕಾರದಚುಕ್ಕಾಣಿ ಹಿಡಿಯಬೇಕಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಕೋವಿಡ್‌ಸೋಂಕು ನೆಪವೊಡ್ಡಿ ಮೇಯರ್‌-ಉಪಮೇಯರ್‌ಚುನಾವಣೆಯನ್ನು ಕಳೆದ ಐದು ತಿಂಗಳಿಂದಮುಂದೂಡಲಾಗಿತ್ತು. ಇದೀಗ ಇದೇ ನ.18ರಂದು ಚುನಾವಣೆ ನಿಗದಿಯಾಗಿದ್ದು, ಮೇಯರ್‌-ಉಪಮೇಯರ್‌ ಆಕಾಂಕ್ಷಿಗಳು ತಮ್ಮ ತಮ್ಮಮುಖಂಡರ ಮನೆಗಳಿಗೆ ಎಡತಾಕುತ್ತಿದ್ದಾರೆ.

Advertisement

ಆಕಾಂಕ್ಷಿಗಳು: ಸಾಮಾನ್ಯಕ್ಕೆ ಮಿಸಲಾಗಿರುವ ಮೇಯರ್‌ಸ್ಥಾನಕ್ಕೆ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಪುತ್ರನವಿರುದ್ಧ 18ನೇ ವಾರ್ಡ್‌ನಿಂದ ಜಯಗಳಿಸಿರುವಮುಲ್ಲಂಗಿ ನಂದೀಶ್‌ ಕುಮಾರ್‌, 30ನೇ ವಾಡ್‌ìನ ಆಸೀಫ್‌, 23ನೇ ವಾರ್ಡ್‌ನ ಪೂಜಾರಿಗಾದೆಪ್ಪ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ20ನೇ ವಾರ್ಡ್‌ನ ಪೇರಂ ವಿಕ್ಕಿ, ಇತ್ತೀಚೆಗಷ್ಟೇಕಾಂಗ್ರೆಸ್‌ ಸೇರ್ಪಡೆಯಾದ ಮೂರನೇ ವಾಡ್‌ìನ ಕಾಂಗ್ರೆಸ್‌ ಬಂಡಾಯ, ಪಕ್ಷೇತರ ಅಭ್ಯರ್ಥಿಮುಂಡೂÉರು ಪ್ರಭಂಜನ್‌ ಕುಮಾರ್‌ ಅವರಹೆಸರುಗಳು ಸಹ ಕೇಳಿಬರುತ್ತಿವೆ. ಆಕಾಂಕ್ಷಿಗಳೆಲ್ಲರೂತಮ್ಮ ತಮ್ಮ ಮುಖಂಡರ ಮೂಲಕ ತೆರೆಮರೆಯಕಸರತ್ತಿನಲ್ಲಿ ತೊಡಗಿದ್ದಾರೆ. ಆದರೆ, ಮೇಯರ್‌ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕಾದುನೋಡಬೇಕಾಗಿ¨

Advertisement

Udayavani is now on Telegram. Click here to join our channel and stay updated with the latest news.

Next