Advertisement

ಭಿಕ್ಷುಕರ ಹಾವಳಿಗೆ ಗುಡ್‌ಬೈ ! ಬಗೆಹರಿದೀತೇ ಶತಮಾನಗಳ ಸಾಮಾಜಿಕ ಪಿಡುಗು?

09:51 AM Jan 21, 2020 | sudhir |

ಬಡತನ ಮತ್ತು ಭಿಕ್ಷಾಟನೆ ಒಂದೇ ನಾಣ್ಯದ 2 ಮುಖಗಳು. ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಅಮ್ಮಾ… ಆಯ್ಯೋ… ದೇಹಿ… ಎಂದು ಕೈಚಾಚುವ ಈ ಭಿಕ್ಷುಕರಿಂದಾಗಿ ದೇಶದ ವರ್ಚಸ್ಸಿಗೂ ಕಳಂಕ. ಜನರಿಗೆ ಅದರಲ್ಲೂ ಪ್ರವಾಸಿಗರಿಗೆ ಇನ್ನಿಲ್ಲದ ಕಿರಿಕಿರಿ. ಚಿಕ್ಕ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಜಾಲಗಳೇ ಇವೆ. ಭಿಕ್ಷಾಟನೆಗೆ ಇಳಿಸುವ ಸಲುವಾಗಿ ಮಕ್ಕಳನ್ನು ಕದಿಯುವವರೂ ಇದ್ದಾರೆ. ಇದೀಗ ಕೇಂದ್ರ ಸರಕಾರ ಭಿಕ್ಷುಕ ಮುಕ್ತ ನಗರಗಳ ನಿರ್ಮಾಣ ಯೋಜನೆಯನ್ನು ಪ್ರಾರಂಭಿಸುತ್ತಿದ್ದು, ಬೆಂಗಳೂರು ಸೇರಿ 10 ನಗರಗಳಲ್ಲಿ ರಾಷ್ಟ್ರ ಮಟ್ಟದ ಅಭಿಯಾನಕ್ಕೆ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಹರಡಿಕೊಂಡಿರುವ ಭಿಕ್ಷಾಟನೆ ಸಮಸ್ಯೆಯ ತೀವ್ರತೆಯನ್ನು ಇಲ್ಲಿ ನೀಡಲಾಗಿದೆ.

Advertisement

3.7 ಲಕ್ಷ ಭಿಕ್ಷುಕರು
ಕೇಂದ್ರ ಸರಕಾರದ 2016ರ ದತ್ತಾಂಶ ದ ಪ್ರಕಾರ ಒಟ್ಟು 3.7ಲಕ್ಷ ಜನರು ಭಿಕ್ಷಾಟನೆಯಲ್ಲಿ ನಿರತರು.

ತುಸು ಇಳಿಕೆ
3.7 ಲಕ್ಷ ಜನರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿ¨ªಾರೆ. 2001ರಲ್ಲಿ ಇದರ ಪ್ರಮಾಣ ಅಧಿಕವಾಗಿದ್ದು, 6.3ಲಕ್ಷ ಜನರು ಭಿûಾಟನೆಯಲ್ಲಿ ತೊಡಗಿದ್ದರು. ಈ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ನೋಡಿದರೆ ಶೇ.40ರಷ್ಟು ಇಳಿಕೆ ಕಂಡಿದೆ.

ಎಚ್ಚೆತ್ತ ಸರಕಾರ
ಜನರಿಗೆ ಕಿರಿಕಿರಿಯಾಗುತ್ತಿರುವ ಭಿಕ್ಷಾಟನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೇಂದ್ರ ಸರಕಾರ ಭಿಕ್ಷುಕ ಮುಕ್ತ ನಗರ ಯೋಜನೆ ಘೋಷಣೆ ಮಾಡಿದ್ದು, ಬೆಂಗಳೂರು ಸೇರಿ 10 ನಗರಗಳಲ್ಲಿ ರಾಷ್ಟ್ರ ಮಟ್ಟದ ಅಭಿಯಾನಕ್ಕೆ ಚಿಂತನೆ ನಡೆಸಿದೆ. ಇದೇ ವರ್ಷದ ಎಪ್ರಿಲ್‌ನಿಂದ ಈ ಅಭಿಯಾನ ಪ್ರಾರಂಭಿಸಲುದ್ದೇಶಿಸಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರಗಳ 60:40 ಅನುದಾನದಲ್ಲಿ ಜಾರಿಯಾಗಲಿರುವ ಯೋಜನೆ.

ಈ ನಗರಗಳಲ್ಲಿ ಅಭಿಯಾನ
ಈ ಪ್ರಕಾರ ದೇಶದ ಬೃಹತ್‌ ನಗರಗಳಾದ ಬೆಂಗಳೂರು, ದಿಲ್ಲಿ, ಮುಂಬಯಿ, ಕೋಲ್ಕತಾ, ಚೆನ್ನೈ, ಹೈದರಾಬಾದ್‌, ನಾಗ್ಪುರ, ಪಟ್ನ, ಇಂದೋರ್‌ ಹಾಗೂ ಲಕ್ನೊ‌ಗಳಲ್ಲಿ ಅಭಿಯಾನ ಆರಂಭವಾಗಲಿದೆ.

Advertisement

ಭಿಕ್ಷುಕರಿಗೆ ಹೊಸ ಬದುಕು
ಅಭಿಯಾನದ ವೇಳೆ ಭಿಕ್ಷುಕರನ್ನು ಗುರುತಿಸಿ ಅವರಿಗೆ ಪುನರ್ವಸತಿ, ವೈದ್ಯಕೀಯ ವ್ಯವಸ್ಥೆ, ಸಮಾಲೋಚನೆ, ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಇನ್ನಿತರ ಸುಸ್ಥಿರ ಅನುಕೂಲತೆಗಳನ್ನು ಮಾಡಿಕೊಟ್ಟು ಅವರ ಸಮಸ್ಯೆಗಳನ್ನು ಪರಿಹರಿಸಲು ಈ ಯೋಜನೆ ನೆರವಾಗಲಿದೆ.

ಲಿಂಗವಾರು ಗಮನಿಸುವುದಾದರೆ 1,91,797 ಪುರುಷರು, 1,69,800 ಮಹಿಳೆಯರು ಭಿಕ್ಷಾಟನೆಯಲ್ಲಿ ನಿರತರಾಗಿದ್ದಾರೆ.

ರಾಜ್ಯದ ಕತೆ
2016ರಲ್ಲಿ ನಡೆಸಿದ ಜನಸಂಖ್ಯಾ ಗಣತಿಯ ಪ್ರಕಾರ ರಾಜ್ಯದಲ್ಲಿ 10,682 ಭಿಕ್ಷುಕರಿದ್ದು, ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಬೆಂಗಳೂರಿನಲ್ಲಿ 1,368 ಭಿಕ್ಷುಕರಿದ್ದಾರೆ.

ಮಕ್ಕಳ ಬಳಕೆ
ಭಿಕ್ಷಾಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪುಟ್ಟ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದ್ದು, ಬಿಹಾರ, ಒಡಿಶಾ, ಕಲಬುರಗಿ ಮತ್ತು ರಾಯಚೂರಿನ ಮಕ್ಕಳೇ ಹೆಚ್ಚು.

ರಾಜ್ಯ ಮುಂಚೂಣಿ
2017ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿಯ ಪ್ರಕಾರ ಭಿಕ್ಷಾಟನೆಗಾಗಿ ಅಪಹರಣಕ್ಕೊಳಗಾದ ಸುಮಾರು 60 ಮಕ್ಕಳನ್ನು ರಾಜ್ಯದಲ್ಲಿ ರಕ್ಷಿಸಲಾಗಿದೆ. ದೇಶಾ ದ್ಯಂತ ದಾಖಲಾದ 72 ಪ್ರಕ ರಣಗಳ ಪೈಕಿ 32 ಪ್ರಕರಣಗಳು ರಾಜ್ಯದಿಂದ ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next