Advertisement
ತಾಲೂಕಿನಲ್ಲಿ ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ ಸುಮಾರು 11ಕ್ಕೆ ಶೇ. 33, ಅಪರಾಹ್ನ 1 ಗಂಟೆಗೆ ಶೇ. 51.35, 3ಕ್ಕೆ 63.17, 5ಕ್ಕೆ ಶೇ. 77, ಸಂಜೆ 6 ಗಂಟೆಗೆ ಶೇ. 80.92 ಮತದಾನವಾಗುವ ಮೂಲಕ ಗ್ರಾಮೀಣರಲ್ಲಿ ಮತದಾನದ ಬಗ್ಗೆ ಇರುವ ಜಾಗೃತಿ ವ್ಯಕ್ತವಾಗಿದೆ. ಕ್ಷೇತ್ರದಲ್ಲಿ ಎಂಡೋಸಲ್ಫಾನ್ ಪೀಡಿತ, ಕುಗ್ರಾಮ, ಅತಿ ಸೂಕ್ಷ್ಮ ಪ್ರದೇಶಗಳಿದ್ದರೂ ಮತದಾನ ಯಶಸ್ವಿಯಾಗಿದೆ.
ಆರೋಗ್ಯ ಇಲಾಖೆಯಿಂದ ಬೂತ್‌ಗಳಿಗೆ 270 ವಿಶೇಷ ಕಿಟ್ ವಿತರಿಸಲಾಗಿದೆ. ನಾರಾವಿ-1 ವೇಣೂರು-1 ಉಜಿರೆ-1 ಕೊಕ್ಕಡ-2 ಸಹಿತ ಒಟ್ಟು 5 ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವಶ್ಯವಿದ್ದಲ್ಲಿ ತುರ್ತು ಸೇವೆಗಾಗಿ ಪ್ರಥಮ ಮತಗಟ್ಟೆ ಅಧಿಕಾರಿ, ದ್ವಿತೀಯ ಮತಗಟ್ಟೆ ಅಧಿಕಾರಿ, ತೃತೀಯ ಮತಗಟ್ಟೆ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು. ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ಸಂಜೆ 6 ಗಂಟೆವರೆಗೆ ಸಿಬಂದಿ ಹಾಗೂ ಡಾಕ್ಟರ್‌ಗಳಿಗೆ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳ ಲಾಗಿತ್ತು ಎಂದು ತಾ| ಆರೋಗ್ಯಾಧಿಕಾರಿ ಡಾ| ಕಲಾಮಧು ತಿಳಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ 241 ಬೂತ್‌ಗಳಲ್ಲಿ ಯಶಸ್ವಿ ಮತದಾನವಾಗಿದ್ದು, ಎಸ್‌ಡಿಎಂ ಕಾಲೇಜಿನ ಡಿಮಸ್ಟರಿಂಗ್ 24 ಕೊಠಡಿಗಳಲ್ಲಿ ಪ್ರತಿ ಕೊಠಡಿಗೆ 6 ಜನ ಸಿಬಂದಿಯಂತೆ ರಾತ್ರಿ 11 ಗಂಟೆಗೆ ಸಂಪೂರ್ಣ ಇವಿಎಂ ಪ್ಯಾಟ್ ಭದ್ರತ ಕೊಠಡಿ ಸೇರಿ, ಬಳಿಕ ಭದ್ರತೆ ಮೂಲಕ ಮಂಗಳೂರು ತಲುಪಿದೆ.
Related Articles
ಬೆಳ್ತಂಗಡಿ ತಾಲೂಕಿನ 241 ಮತಗಟ್ಟೆಗಳಲ್ಲಿ ಎ. 18ರಂದು ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿತ್ತು. ಶೇ. 80.92 ಮತದಾನ ದಾಖಲೆಯಾಗಿದೆ. ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಂಡ ಎಲ್ಲ ಮತದಾರರಿಗೂ, ಈ ಬಗ್ಗೆ ಜಾಗೃತಿಯನ್ನು ಮೂಡಿಸಲು ಶ್ರಮಿಸಿದ ಅಧಿಕಾರಿಗಳು, ಪತ್ರಿಕಾ ಮಿತ್ರರು, ಸ್ವಯಂ ಸೇವಾ ಸಂಘಗಳು, ಪ್ರತ್ಯಕ್ಷ- ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಮತ್ತು ಸಹಾಯಕ ಚುನಾವಣಾಧಿಕಾರಿ ಕಚೇರಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
Advertisement
ಮತದಾನಕ್ಕೆ ಉತ್ತಮ ಸ್ಪಂದನೆಶಾಂತಿಯುತ ಹಾಗೂ ಶೇಕಡವಾರು ಮತದಾನದಲ್ಲಿ ತಾಲೂಕಿನಿಂದ ಉತ್ತಮ ಸ್ಪಂದನೆ ದೊರೆತಿದೆ. ಕೆಲವೆಡೆ ಮತಯಂತ್ರ ಸಮಸ್ಯೆಯಾದ ತತ್‌ಕ್ಷಣ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮುಂಜಾನೆ ಸುಮಾರು 3 ಗಂಟೆ ಬಳಿಕ ಎಲ್ಲ ಇವಿಎಂ ಯಂತ್ರವನ್ನು ಭದ್ರತೆ ಮೂಲಕ ಮಂಗಳೂರಿಗೆ ತಲುಪಿಸಲಾಗಿದೆ.
ಎಚ್.ಆರ್. ನಾಯಕ್, ಸಹಾಯಕ ಚುನಾವಣಾಧಿಕಾರಿ