Advertisement
ಆಗಸ್ಟ್ ತಿಂಗಳಾಂತ್ಯ ವೇಳೆ ಹವಾಮಾನದಲ್ಲಿನ ದಿಢೀರ್ ಬದಲಾವಣೆಯಿಂದಾಗಿ ಅನಾರೋಗ್ಯ ಪೀಡಿತ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ವೈರಾಣು ಜ್ವರ ಉಲ್ಬಣಗೊಳ್ಳುತ್ತಿದೆ. ವಿಶೇಷವಾಗಿ 2ರಿಂದ 8 ವರ್ಷದೊಳಗಿನ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಹಾಸಿಗೆ ಕೊರತೆ ಕಾಡಲಾರಂಭಿಸಿದೆ. ಇತ್ತ ಬ್ರಿಮ್ಸ್ ಸೇರಿ ಸರ್ಕಾರಿ ಆಸ್ಪತ್ರೆ ಗಳಲ್ಲಿಯೂ ರೋಗಿಗಳ ದಾಖಲಾತಿ ಹೆಚ್ಚುತ್ತಿದೆ. ಸದ್ಯ ಯಾವುದೇ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿಲ್ಲವಾದರೂ ಸೋಂಕಿನ ಭೀತಿ ಮಾತ್ರ ತಪ್ಪಿಲ್ಲ.
Related Articles
Advertisement
ವೈರಾಣು ಜ್ವರದಿಂದ ದಾಖಲಾಗುತ್ತಿರುವ ಮಕ್ಕಳು ನಾಲ್ಕೈದು ದಿನಗಳಲ್ಲಿ ಚಿಕಿತ್ಸೆಯಿಂದ ಗುಣಮುಖ ಆಗುತ್ತಿದ್ದಾರೆ. ಆದರೆ, ಉಸಿರಾಟ ಸಮಸ್ಯೆಯಿರುವ ಮಕ್ಕಳಿಗೆ ಆಮ್ಲಜನಕ ಸಂಪರ್ಕದ ಅಗತ್ಯವಿರುವುದರಿಂದ ಒಂದು ವಾರ ಬೇಕಾಗುತ್ತಿದೆ. ಇನ್ನೂ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವ ಮಕ್ಕಳ ದೇಹಸ್ಥಿತಿ ಗಂಭೀರವಾಗುತ್ತಿದ್ದು, ಅಂಥವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೆ ಕೋವಿಡ್ ಹಾಟ್ಸ್ಪಾಟ್ ಎನಿಸಿಕೊಂಡಿದ್ದ ಬೀದರ ಜಿಲ್ಲೆ ಈಗ ರಾಜ್ಯದ ಮೊದಲ ಸೋಂಕು ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದರೂ ಎರಡು ರಾಜ್ಯದ ಗಡಿಗೆ ಹೊಂದಿಕೊಂಡಿರುವುದರಿಂದ 3ನೇ ಅಲೆಯ ಆತಂಕ ಇದ್ದೆ ಇದೆ. ಈ ಸಮಯದಲ್ಲೇ ಮಕ್ಕಳಲ್ಲಿ ವೈರಲ್ ಕಾಯಿಲೆ ಕಾಣಿಸಿಕೊಂಡಿರುವುದು ಮಕ್ಕಳಲ್ಲಿ ಆಘಾತ ಮೂಡಿಸಿದೆ. ಆದರೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಹಾಗಂತ ಉದಾಸಿನ ತೋರದೆ ಮಕ್ಕಳನ್ನು ಸರಿಯಾಗಿ ಆರೈಕೆ ಮಾಡಬೇಕೆಂಬುದು ವೈದ್ಯರ ಸಲಹೆ.
ಹವಾಮಾನ ವೈಪ್ಯರೀತ್ಯದಿಂದ ಜಿಲ್ಲೆಯಲ್ಲೂ ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಿದ್ದು, ಕೆಮ್ಮು, ದಮ್ಮು, ಜ್ವರ, ಶೀತ ಮತ್ತು ಹೊಟ್ಟೆ ಸೆಳೆತ ಕಂಡು ಬಂದಿದೆ. ಬ್ರಿಮ್ಸ್ನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 95 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಇನ್ನೂ 11 ಜನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಮಕ್ಕಳಿಗೆ ಕೋವಿಡ್ ಪರೀಕ್ಷೆ ಬಳಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ ಯಾವುದೇ ಮಗುವಿನಲ್ಲೂ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ ಪೋಷಕರು ಯಾವುದೇ ಆತಂಕ ಪಡಬೇಕಿಲ್ಲ. ಜ್ವರ ಕಾಣಿಸಿಕೊಂಡಲ್ಲಿ ಶೀಘ್ರ ಚಿಕಿತ್ಸೆ ನೀಡಬೇಕು.-ಡಾ| ಶಾಂತಲಾ ಕೌಜಲಗಿ, ಮುಖ್ಯಸ್ಥರು, ಮಕ್ಕಳ ವಿಭಾಗ, ಬ್ರಿಮ್ -ಶಶಿಕಾಂತ ಬಂಬುಳಗೆ