Advertisement

ಪ್ರವಾಸ ಕೈಗೊಳ್ಳುವ ಮುನ್ನ ಕಡ್ಡಾಯ ಮತದಾನ ಮಾಡಿ

04:13 PM Apr 17, 2019 | Nagendra Trasi |

ಕೋಲಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಜಯ ಕರ್ನಾಟಕದಿಂದ ಮತದಾನ ಜಾಗೃತಿ ಜಾಥಾ ನಡೆಯಿತು.

Advertisement

ಜಾಥಾದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಉಪಾಧ್ಯಕ್ಷ ರಾ.ಮುನಿಸ್ವಾಮಿ, ರಾಜ್ಯಾದ್ಯಂತ 30 ಜಿಲ್ಲೆಗಳಲ್ಲೂ ಕಡ್ಡಾಯ ಮತದಾನ ಜನಜಾಗೃತಿ ಜಾಥಾ ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ರೀತಿಯಾಗಿ ಕೋಲಾರದಲ್ಲೂ ಹಮ್ಮಿಕೊಳ್ಳಲಾಗಿದೆ.

ನಾಡಿನ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಬೇಕೆಂದು ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಡಾ.ಎಂ.ಜಗದೀಶ್‌ಗೌಡ ಮಾತನಾಡಿ, ಮತದಾನದ ಹಿಂದೆ ಮುಂದೆ ಸಾಲು ಸಾಲುಗಳು ರಜೆಗಳು ಇರುವುದರಿಂದ ಪ್ರವಾಸದಲ್ಲೇ ಕಾಲ ಕಳೆಯುವ ಮುನ್ನಾ ಕಡ್ಡಾಯ ಮತದಾನ ಮಾಡಿ ಎಂದು ಉದ್ಯೋಗಿಗಳಲ್ಲಿ ಮನವಿ ಮಾಡಿದರು.

ಕಡ್ಡಾಯ ಮತದಾನ: ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಆರ್‌.ತ್ಯಾಗರಾಜ್‌, ದೇಶದ ಏಳಿಗೆಗಾಗಿ ರಾಷ್ಟ್ರದ ಜನರ ಹಿತದೃಷ್ಟಿಯಿಂದ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ, ನಿಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಮತದಾನ ನಮ್ಮ ಹಕ್ಕು: ಇದಕ್ಕೂ ಮೊದಲು ಗಾಂಧಿವನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ
50 ಬೈಕ್‌, 25ಕ್ಕೂ ಹೆಚ್ಚು ಆಟೋ ರಿಕ್ಷಾ ಪಾಲ್ಗೊಂಡಿದ್ದು, ಜಯ ಕರ್ನಾಟಕ ಕಾರ್ಯಕರ್ತರು ಕೈಯಲ್ಲಿ “ನಮ್ಮ ಮತ ನಮ್ಮ ಹೆಮ್ಮೆ’, ದೇಶದ ನಾಗರಿಕರ ಏಳಿಗೆಗಾಗಿ ಕಡ್ಡಾಯ ಮತದಾನ, ಮತದಾನ ನಮ್ಮ ಜನ್ಮ ಹಕ್ಕು ಎಂಬ ನಾಮಫಲಕವನ್ನು ಹಿಡಿದು ಘೋಷಣೆ ಕೂಗುತ್ತಾ
ಸಾಗಿದರು.

Advertisement

ಮೆರವಣಿಗೆಯು ಮಹಾತ್ಮ ಗಾಂಧಿ  ರಸ್ತೆಯಿಂದ ದೊಡ್ಡಪೇಟೆ ಮೂಲಕ ಹೊಸ ಬಸ್‌ ನಿಲ್ದಾಣ,
ಕಾಳಮ್ಮಗುಡಿ ರಸ್ತೆ, ಅಮ್ಮವಾರಿಪೇಟೆ ಹಾಗೂ ಮೆಕ್ಕೆ ವೃತ್ತದಿಂದ ಕಾಲೇಜು ರಸ್ತೆ ಮಾರ್ಗವಾಗಿ ಡೂಂಲೈಟ್‌ ವೃತ್ತದಲ್ಲಿ ಅಂತ್ಯಗೊಳಿಸಲಾಯಿತು.

ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎನ್‌.ಮಂಜುನಾಥ್‌, ಉಪಾಧ್ಯಕ್ಷರಾದ ಸಿಆರ್‌ಪಿ ವೆಂಕಟೇಶ್‌, ಕೆ.ಎನ್‌
.ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ಸುಧಾಕರ್‌, ಮಾಲೂರು ತಾಲೂಕು ಅಧ್ಯಕ್ಷ ಕೆ.ದಿನೇಶ್‌ಗೌಡ,
ಗರಂಡಾನಾಗರಾಜ್‌, ಗಾಂಧಿ ನಗರ ವೆಂಕಟರವಣ, ಲೋಕನಾಥಸಿಂಗ್‌, ಕೋಲಾರ ತಾಲೂಕು ಅಧ್ಯಕ್ಷ ಬಾಬು, ವೆಂಕಟೇಶ್‌, ತೊರ್ನಹಳ್ಳಿ ಪ್ರಶಾಂತ್‌, ಕಾಂತರಾಜ್‌, ಕೊಂಡರಾಜನಹಳ್ಳಿ ಜಗದೀಶ್‌, ಯುವ ಘಟಕದ ಅಧ್ಯಕ್ಷ ಅಭಿ ಭಾರದ್ವಾಜ್‌, ಕವನ್‌, ಆಟೋ ಘಟಕದ ಅಧ್ಯಕ್ಷ ಎಂ.ವೆಂಕಟಪ್ಪ, ಬಂಬೂಬಜಾರ್‌ ಮಂಜು, ಐಸ್‌ ನಾಗರಾಜ್‌, ಗಂಗಾಧರ್‌, ಪ್ರಕಾಶ್‌, ಅಮರನಾಥ್‌, ನವೀನ್‌, ರಾಜೇಂದ್ರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next