Advertisement

ಪ್ರತಿಸ್ಪರ್ಧಿ ನೋಡಿ ಮೈಮರೆಯಬೇಡಿ

12:35 PM Apr 05, 2019 | Team Udayavani |

ದಾವಣಗೆರೆ: ಪ್ರತಿಸ್ಪರ್ಧಿ ನೋಡಿ ಚುನಾವಣೆಯಲ್ಲಿ ಗೆದ್ದಿದ್ದೇವೆಂದು ಮೈ ಮರೆಯಬೇಡಿ. ಶತ್ರುವನ್ನು ಪೂರ್ಣ ಮಣಿಸಿದ ನಂತರವೇ ಯುದ್ಧದಲ್ಲಿ ಗೆದ್ದಂತೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಆ ಪಕ್ಷದ ಜಿಲ್ಲಾ ಉಸ್ತುವಾರಿ ಆಯನೂರು ಮಂಜುನಾಥ್‌ ಎಚ್ಚರಿಸಿದ್ದಾರೆ.

Advertisement

ಗುರುವಾರ, ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ನಂತರ ನಡೆದ ಮೆರವಣಿಗೆ ವೇಳೆ ನಗರದ ರಾಮ್‌ ಆ್ಯಂಡ್‌ ಕೋ ಸರ್ಕಲ್‌ನಲ್ಲಿ ಕಾರ್ಯಕರ್ತನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಎದುರಾಳಿ ನೋಡಿ ನಾವು ಗೆದ್ದಂತೆ ಎಂಬುದಾಗಿ ಭಾವಿಸಬಾರದು. ಮೈಮರೆತರೆ ಬೆನ್ನಿಗೆ ಬಾಣ ಬಿಡುವ ಸಾಧ್ಯತೆ ಇದೆ. ಆದ್ದರಿಂದ ಶತ್ರುವನ್ನು ಸಂಪೂರ್ಣ ಮಣಿಸಿದ ಮೇಲೆ ನಾವು ಜಯ ಸಾಧಿಸಿದಂತೆ ಎಂದು ಕಿವಿಮಾತು ಹೇಳಿದರು.

ಈ ಚುನಾವಣೆ ಯಾವುದೇ ವ್ಯಕ್ತಿಗಾಗಲ್ಲ, ದೇಶಕ್ಕಾಗಿ. 70 ವರ್ಷದಲ್ಲಿ ಭಾರತ ಎಷ್ಟು ಬಲಿಷ್ಠ ಎಂಬುದನ್ನು ಸಾಬೀತು ಮಾಡುವ ಚುನಾವಣೆ. ಸೊಕ್ಕಿನ ಮಾತಾಡುವ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡುವ ಮಹತ್ವದ ಚುನಾವಣೆ ಎಂದು ವಿಶ್ಲೇಷಿಸಿದರು.

10 ವರ್ಷಗಳ ಕಾಲ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಕ್ಯಾತೆ ತೆಗೆಯುತ್ತಿತ್ತು. ಅವರು ಎಂದೂ ಹೊಡೆಯಲು ಮುಂದಾಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ
ಹೊಡೆಯುವುದೇಗೆ ಎಂಬುದನ್ನು ತೋರಿಸಿಕೊಟ್ಟ ಗಂಡೆದೆಯವರು. ಈಗ ಆ ದೇಶ ಉಸಿರೆತ್ತುವುದು ಕಷ್ಟ. ಭಾರತಕ್ಕೆ ಘನತೆ, ಗೌರವ ತಂದು ಕೊಟ್ಟು ಇಡೀ ವಿಶ್ವವೇ ಮೆಚ್ಚುವಂತೆ ಮಾಡಿದ ಮಾಡಿದ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಲು ಈ ಕ್ಷೇತ್ರದಲ್ಲಿ ಜಿ.ಎಂ.ಸಿದ್ದೇಶ್ವರ್‌ ಗೆಲ್ಲಲೇಬೇಕು. ಅದಕ್ಕಾಗಿ ಕಾರ್ಯಕರ್ತರು ಹೆಚ್ಚು ಶ್ರಮಿಸಬೇಕು ಎಂದು ಮನವಿ
ಮಾಡಿದರು.

ಏರ್‌ಸ್ಟ್ರೆಕ್‌ ಬಗ್ಗೆ ಇಡೀ ಭಾರತವೇ ಮೋದಿಯವರಿಗೆ ಜೈಕಾರ ಹಾಕುತ್ತಿದ್ದರೆ, ಕಾಂಗ್ರೆಸ್‌ನವರು ಆ ದಾಳಿಯ ಸಾಕ್ಷ್ಯ ಕೇಳುತ್ತಿದ್ದಾರೆ. ನಮ್ಮ ಸೈನಿಕರು ಹೋಗಿದ್ದು ಹನಿಮೂನ್‌ಗಲ್ಲ, ಗಡಿ ದಾಟಿ ಶತ್ರಗಳ ನಾಶಕ್ಕೆ ಎಂಬುದು ಕೂಡ ಕಾಂಗ್ರೆಸ್ಸಿಗರಿಗೆ ಅರ್ಥವಾಗುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದ ಆಯನೂರು, ಇಂತಹ ಮನಸ್ಥಿತಿಯ ಕಾಂಗ್ರೆಸ್‌ನವರು ದೇಶದ್ರೋಹದ ಚಿಂತನೆಯವರು. ಕಾಂಗ್ರೆಸ್‌ ಗುಲಾಮಗಿರಿಯ ಸಂತಾನ. ಆದರೆ, ಬಿಜೆಪಿಯಲ್ಲಿ ಚಾಯ್‌ ಮಾರುವ ಹುಡುಗ ಕೂಡ ಪ್ರಧಾನಿಯಾಗಬಲ್ಲ ಎಂಬುದು ಸಾಬೀತಾಗಿದೆ. ಬಗ್ಗುವ ಪ್ರಪಂಚವನ್ನು ಬಗ್ಗಿಸುವ ನಾಯಕ ಬೇಕಾಗಿದೆ. ಹಾಗಾಗಿ ದೇಶದ ಸ್ವಾಭಿಮಾನ, ಘನತೆ, ದೇಶಭಕ್ತಿ ಎತ್ತಿಹಿಡಿದ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ ಈ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕಿದೆ ಎಂದರು.

Advertisement

ನರೇಂದ್ರ ಮೋದಿಗಾಗಿ ತ್ಯಾಗ: ರಾಜಕೀಯ ಪಕ್ಷಗಳಲ್ಲಿ ಎಲ್ಲರೂ ಕೆಟ್ಟವರಿಲ್ಲ. ಕೆಲವರು ಒಳ್ಳೆಯವರೂ ಇದ್ದಾರೆ. ಅಂತಹವರು ಈ ಬಾರಿ ಲೋಕಸಭಾ ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ದೇಶ ಹಾಗೂ ಮೋದಿಗಾಗಿ ಚುನಾವಣೆಯಿಂದ ಹಿಂದೆ ಸರಿದ ಮಹಾನ್‌ ವ್ಯಕ್ತಿಗಳಿಗೆ ನಿಜಕ್ಕೂ ನಾನು ಧನ್ಯವಾದ ಹೇಳಬೇಕು. ಅವರ ಸಹಕಾರ ಹೀಗೆ ಇರಲಿ, ಅದು ಮುಂದುವರಿಯಲಿ ಎಂದು ಶಾಮನೂರು ಕುಟುಂಬದವರ ಹೆಸರು ಪ್ರಸ್ತಾಪಿಸದೇ ಇದೇ ಸಂದರ್ಭದಲ್ಲಿ ಆಯನೂರು ಮಂಜುನಾಥ್‌
ಮಾರ್ಮಿಕವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next