Advertisement

ಪರಿಸರ ಸಂರಕ್ಷಣೆಯಲ್ಲಿ ತಂತ್ರಜ್ಞಾನದ ಪಾತ್ರ

01:16 AM Jun 05, 2021 | Team Udayavani |

ತಂತ್ರಜ್ಞಾನ ದಿನೇದಿನೆ ಪ್ರಗತಿಯನ್ನು ಹೊಂದುತ್ತಿದೆ. ಹಲವಾರು ಕೆಲಸಗಳಿಗೆ ನಾವು ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಇದರಿಂದ ನಮ್ಮ ಕೆಲಸಗಳು ಸುಲಭವಾಗುತ್ತಿರುವುದಲ್ಲದೆ ಶ್ರಮವೂ ಕಡಿಮೆಯಾಗುತ್ತಿದೆ. ಆದರೆ ತಂತ್ರಜ್ಞಾನದ ಅತಿಯಾದ ಬಳಕೆ ಪರಿಸರಕ್ಕೆ ಒಂದಷ್ಟು ಹಾನಿ ಉಂಟು ಮಾಡು ತ್ತಿರುವುದಂತೂ ನಿಜ. ಹಾಗೆಂದು ಇಂದಿನ ಯುಗದಲ್ಲಿ ಅನಿವಾರ್ಯ ವಾಗಿರುವ ತಂತ್ರಜ್ಞಾನದಿಂದ ದೂರ ಸರಿಯಲು ಸಾಧ್ಯ ವಿಲ್ಲ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತುಸು ಭಿನ್ನವಾಗಿ ಆಲೋಚಿ ಸುವು ದಾದರೆ ಪರಿಸರಕ್ಕೆ ಮಾರಕವಾಗುವ ತಂತ್ರಜ್ಞಾನ ಗಳ ಬಳಕೆ ಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಪೂರಕವಾಗಿ ತಂತ್ರಜ್ಞಾನವನ್ನು ಬಳಸಲು ನಾವು ಮನ ಮಾಡಬೇಕಿದೆ.

Advertisement

ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಗೆ ತಂತ್ರಜ್ಞಾನ ಬಳಕೆ :

ಪರಿಸರವನ್ನು ಅತೀ ಹೆಚ್ಚು ಕುಲ ಗೆಡಿಸುತ್ತಿರುವುದು ಪ್ಲಾಸ್ಟಿಕ್‌ ತ್ಯಾಜ್ಯ. ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಬಗೆಗೆ ದಶಕಗಳಿಂದ ವಿಶ್ವದೆಲ್ಲೆಡೆ ಬಲುದೊಡ್ಡ ಕೂಗು ಎದ್ದಿದ್ದರೂ ಇಂದಿಗೂ ಅದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಉಪಯೋಗಿಸಿದ ಪ್ಲಾಸ್ಟಿಕ್‌ಗಳನ್ನು ಮರು ಬಳಕೆ ಮಾಡುವುದು ಅಥವಾ ತಂತ್ರಜ್ಞಾನದ ಮೂಲಕ ಅದರ ಸೂಕ್ತ ವಿಲೇವಾರಿ ಮಾಡುವುದರಿಂದ ಪರಿಸರ ಹಾನಿಯನ್ನು ತಪ್ಪಿಸಬಹುದು. ಇದರಿಂದ ನಗರ ಮಾತ್ರವಲ್ಲದೆ ಇದೀಗ ಗ್ರಾಮೀಣ ಪ್ರದೇಶಗಳನ್ನೂ ಕಾಡುತ್ತಿರುವ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಮುಕ್ತಿ ದೊರಕುತ್ತದೆ.

ಎಲೆಕ್ಟ್ರಿಕ್‌ ವಾಹನಗಳ ಬಳಕೆ
ಪೆಟ್ರೋಲ್‌, ಡೀಸೆಲ್‌ ಮೊದಲಾದ ಇಂಧನಗಳಿಂದ ಚಲಾಯಿಸುವ ವಾಹನಗಳಿಂದ ಭಾರೀ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಿದ್ದೇ ಆದಲ್ಲಿ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ. ಈಗಾಗಲೇ ಎಲೆಕ್ಟ್ರಿಕ್‌ ವಾಹನಗಳನ್ನು ವಿಶ್ವಾದ್ಯಂತ ಪರಿಚಯಿಸಲಾಗಿದ್ದರೂ ಇವಿನ್ನೂ ಅಂಬೆಗಾಲಿಡುತ್ತಿದೆ. ಎಲೆಕ್ಟ್ರಿಕ್‌ ವಾಹನಗಳು ಇನ್ನಷ್ಟು ಸುಧಾರಣೆ ಕಂಡದ್ದೇ ಆದಲ್ಲಿ ಅವು ಜನರ ಗಮನ ಸೆಳೆಯಬಹುದಾಗಿದೆ. ಇದರ ಜತೆಯಲ್ಲಿ ಈ ವಾಹನಗಳಿಗೆ ಸರಕಾರಗಳಿಂದ ಹೆಚ್ಚಿನ ಉತ್ತೇಜನದ ಅಗತ್ಯವಿದೆ.

ಜೈವಿಕ ಗೊಬ್ಬರಗಳ ಅಭಿವೃದ್ಧಿಗೆ ತಂತ್ರಜ್ಞಾನ
ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಕೃಷಿ ಚಟು ವಟಿಕೆಗಳನ್ನು ಮಾಡುವುದರಿಂದ ಬೆಳೆಗಳು ವಿಷಯುಕ್ತ ವಾಗುವುದರ ಜತೆಗೆ ಮಣ್ಣು ತನ್ನ ಫ‌ಲ ವತ್ತತೆಯನ್ನು ಕಳೆದುಕೊಂಡು ಬರಡಾಗುತ್ತದೆ. ಇದನ್ನು ತಡೆಗಟ್ಟಲು ಜೈವಿಕಗೊಬ್ಬರಗಳ ಬಳಕೆಯನ್ನು ಇನ್ನಷ್ಟು ವ್ಯಾಪಕಗೊಳಿಸಬೇಕು. ತರಕಾರಿ ಅಥವಾ ಇತರ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು.

Advertisement

ಸೋಲಾರ್‌/ ನವೀಕರಿಸಬಹುದಾದ ಇಂಧನ ಬಳಕೆ
ಸೋಲಾರ್‌ ತಂತ್ರಜ್ಞಾನವನ್ನು ಇನ್ನಷ್ಟು ವ್ಯಾಪಕವಾಗಿ ಬಳಸಲು ನಾವು ಮುಂದಾಗಬೇಕಿದೆ. ಪ್ರತಿಯೊಂದಕ್ಕೂ ನಾವು ವಿದ್ಯುತ್‌ ಅನ್ನೇ ಅವಲಂಬಿಸಿರುವುದರಿಂದ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಕಷ್ಟಸಾಧ್ಯವಾಗುತ್ತಿದೆ. ಈ ಕಾರಣದಿಂದಾಗಿ ಉಷ್ಣ ವಿದ್ಯುತ್‌ ಸ್ಥಾವರಗಳತ್ತ ಸರಕಾರಗಳು ಹೆಚ್ಚಿನ ಆಸಕ್ತಿಯನ್ನು ತೋರು ತ್ತಿವೆ. ಇದರಿಂದ ಪರಿಸರದ ಮೇಲೆ ಭಾರೀ ಪರಿಣಾಮಗಳುಂಟಾಗುತ್ತಿ
ರುವುದರಿಂದ ಸೌರ ಮತ್ತು ಪವನ ಶಕ್ತಿಯ ಉತ್ಪಾದನೆಯತ್ತ ಇನ್ನಷ್ಟು ಹೆಚ್ಚಿನ ಆಸ್ಥೆ ವಹಿಸಬೇಕಿದೆ. ತಂತ್ರಜ್ಞಾನವನ್ನು ಬಳಸಿ ನವೀಕರಿಸಬಹುದಾದ ಇಂಧನಗಳ ಉತ್ಪಾದನೆ ಮತ್ತು ಅವುಗಳ ಬಳಕೆಯ ಹೆಚ್ಚುವರಿ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಿದೆ.

ವನ್ಯಜೀವಿಗಳ ಸಂರಕ್ಷಣೆ
ಪರಿಸರದಲ್ಲಿ ವನ್ಯಜೀವಿಗಳೂ ಪ್ರಧಾನ ಪಾತ್ರ ವಹಿಸುತ್ತವೆ. ಅವುಗಳನ್ನು ಸಂರಕ್ಷಿಸಲು ತಂತ್ರಜ್ಞಾನವನ್ನು ಬಳಕೆ ಮಾಡಬಹುದು. ಅಳಿವಿನಂಚಿನಲ್ಲಿತುವ ಪ್ರಾಣಿಗಳಿಗೆ ಜಿಪಿಎಸ್‌ ಅಳವಡಿಸಿ ಅವುಗಳ ಚಲನವಲನಗಳ ಮೇಲೆ ನಿಗಾ ಇಡುವುದು, ಅರಣ್ಯಗಳಲ್ಲಿ ಸಿಸಿಟಿವಿ ಅಳವಡಿಕೆ, ಸ್ಮಾರ್ಟ್‌ ಕಾಲರ್‌ಗಳ ಅಳವಡಿಕೆಯಂತಹ ಕ್ರಮಗಳಿಂದ ವನ್ಯಜೀವಿಗಳ ಅಕ್ರಮ ಬೇಟೆಗೆ ಕಡಿವಾಣ ಹಾಕಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next