Advertisement

ನಮಗೆ ಓಟ್‌ ಹಾಕುವವರು ಹಳ್ಳಿಯಲ್ಲಿದ್ದಾರೆ: ಸಿ.ಎಂ.

09:01 AM Mar 25, 2019 | Team Udayavani |

ಕುಣಿಗಲ್‌: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಯಾರು ಎಷ್ಟು ಬೇಕಾದ್ರೂ ಅಪಪ್ರಚಾರ ಮಾಡ್ಲಿ, ನಾನಂತೂ ಆ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಬಲ ಏನು ಎಷ್ಟು ಎಂಬುದಾಗಿ ನನಗೆ ತಿಳಿದಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

Advertisement

ಸುಮಲತಾ ಅಂಬರೀಷ್‌ ಅವರು ನಮಪತ್ರ ಸಲ್ಲಿಸುವ ದಿನ ಅವರಿಗೆ ದೊರೆತಿದ್ದ ಜನಬೆಂಬಲದ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿಯವರು ಇದೇ ಸಂದರ್ಭದಲ್ಲಿ ಹೇಳಿದರು. ನಮಗೆ ಮತ ಹಾಕುವವರು ಹಳ್ಳಿಯಲ್ಲಿರುವ ಜನ ಅವರಿಗೆಲ್ಲಾ ಈ ಟ್ರೋಲ್‌ ಗೀಲ್‌ ಗೊತ್ತಿಲ್ಲ ಅವರೇನಿದ್ರೂ ನಮ್ಮ ಸರಕಾರದ ಸಾಧನೆ ನೋಡಿ ಮತಹಾಕುತ್ತಾರೆ ಎಂಬ ವಿಶ್ವಾಸವನ್ನೂ ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಸುಮಲತಾ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮತ್ತು ಸಾರ್ವಜನಿಕ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ‘ಅಂದು ಆ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ ಹಾಳಾಗಿದ್ದಿದ್ದಕ್ಕೆ ನಾನೇನು ಮಾಡೋಕಾಗುತ್ತೆ?’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next