Advertisement
ಸೈಮನ್ ಫರ್ನಾಂಡಿಸ್: ಆದಷ್ಟು ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವುದಕ್ಕೆ ಮೊದಲ ಆದ್ಯತೆ. ಸ್ವಂತ ವಾಹನ ಉಪಯೋಗಿಸುವವರು ಶಿಸ್ತುಬದ್ದವಾಗಿ ವಾಹನ ಚಲಾಯಿಸುವುದು.
Related Articles
Advertisement
ಗಣೇಶ್ ಪ್ರಸಾದ್ ಎನ್: ಟ್ರಾಫಿಕ್ ಸಮಸ್ಯೆಗೆ ವಾಹನಗಳ ಉತ್ಪಾದನೆ ಮೇಲೆ ಕಡಿವಾಣ ಹಾಕಿದ್ರೆ ಸಲ್ಲದು, ಮತ್ತು ಎಲ್ಲಾ ವಾಹನ ಚಾಲಕರು ನಿಯಮ ಪಾಲನೆ ಮಾಡಿದರು ವಾಹನದ ಸಂಖ್ಯೆ ಹೆಚ್ಚು ಇದ್ದರೆ ಟ್ರಾಫಿಕ್ ಆಗಿಯೇ ಆಗುತ್ತೆ.ಅದಕ್ಕೆ ಕೆಲವು ಪ್ರದೇಶದ ಅಥವಾ ಕೆಲ ಸಮಯಕ್ಕೆ ನಿಗದಿತ ವಾಹನಗಳ ಬಳಕೆಗೆ ಅನುವು ಮಾಡಿದ್ರೆ (ನಿಗದಿತ ಪ್ರಮಾಣದಲ್ಲಿ) ಸಾಧ್ಯವಿದೆ. ಹಾಗೆಯೇ Gps ಮೂಲಕ family car ಗಳನ್ನು ಟ್ಯಾಗ್ ಮಾಡಿ ಅಂತಹ ಕಾರುಗಳು ಒಂದೇ ಮಾರ್ಗದಲ್ಲಿ ಚಲಿಸುತ್ತಿರುವಾಗ ಒಂದೇ ಅಥವಾ ಪ್ರಯಾಣಿಕರ ಸಂಖ್ರೆ ಆಧರಿಸಿ ಅನುಮತಿ ನೀಡಬೇಕು. ಮತ್ತು ಸಾರ್ವಜನಿಕ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು. ಅತೀ ಹೆಚ್ಚು ಟ್ರಾಫಿಕ್ ಇರುವ ಕಡೆ ಬ್ರಿಡ್ಗೆಗಳನ್ನು ನಿರ್ಮಾಣ ಮಾಡಿದ್ರೆ ಅಡೆ ತಡೆಗಳನ್ನು ನಿವಾರಿಸಬಹುದು.
ವಿನೋದ್ ಕುಮಾರ್ ಸಿ ಎಂ : ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಮತ್ತು ಹತ್ತಿರವಿರುವ ಜಾಗಗಳಿಗೆ ನಡೆದುಕೊಂಡು ಹೋಗುವುದು.
ಪ್ರದೀಪ್ ಗೌಡ: ಸಾಫ್ಟ್ ವೇರ್ ಫೀಲ್ಡ್ ನಲ್ಲಿ ಕೆಲಸ ಮಾಡೋರು ಸ್ವಂತ ಕಾರ್ ಮನೇಲಿ ಬಿಟ್ಟು ಪೀಕ್ ಅಪ್ and ಡ್ರಾಪ್ ಕೊಡುವ ಕಂಪೆನಿ ವೆಹಿಕಲ್ ಬಳಕೆ ಮಾಡ್ಕೋಬೇಕು ಸ್ವಲ್ಪ ನಾದ್ರೂ ದಟ್ಟಣೆ ಕಡಿಮೆ ಆಗುತ್ತೆ ಕೆಲವರು ಒಂದು xuv ಕಾರ್ ನಲ್ಲಿ ಒಬ್ಬರೇ ಕೆಲಸಕ್ಕೆ ಬರ್ತರೆ.
ರಾಜೀತ್ ಕಲಪ್ಪ: ಪ್ರತಿಯೊಬ್ಬರೂ ಸಾರಿಗೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಯಾವುದೇ ಉಪಾಯ ಅಗತ್ಯವಿಲ್ಲ, , ಒಂದು ವೇಳೆ ಸೀರೀಸ್ ವಾಹನ ಚಾಲನೆ ಅಥವಾ ಒಂದು ಮನೆಗೆ ಒಂದೇ ಕಾರು ಅಥವಾ ಇನ್ಯಾವುದೇ ನಿಯಮಗಳನ್ನು ಜಾರಿಗೆ ತಂದರೂ ಸಂಚಾರಿ ನಿಯಮಗಳು ಪಾಲನೆಯಾಗದಿದ್ದಲ್ಲಿ ಎಲ್ಲವೂ ನೀರಲ್ಲಿ ಸೀಗೇಕಾಯಿ ತೊಳೆದಂತೆ.
ರಾಜಣ್ಣ ವಿಷ್ಣು: ಕಾರ್ ಗಳನ್ನ ಕೊಳ್ಳೋರಿಲ್ಲ, ಆದರೆ ಸರ್ಕಾರವೇ ಕಾರ್ ಉತ್ಪಾದಕರಿಗೆ ಉತ್ತೇಜನ ಕೊಡ್ತಾ ಇದೆ. ಎಲ್ಲಿದೆ ಸ್ವಾಮಿ ಕಾರ್ ನಿಲ್ಲಿಸೋಕೆ ಜಾಗ, ಕಾರ್ ಓಡಿಸೋಕೆ ರಸ್ತೆ. ಇನ್ನು ಎಷ್ಟು ಕಾರ್ ಕೊಳ್ಳಬೇಕು ಜನ. ವಾಯುಮಾಲಿನ್ಯ ಹದಗೆಟ್ಟಿದೆ, ಪೆಟ್ರೋಲ್ ಡೀಸೆಲ್ ರೇಟ್ ಜಾಸ್ತಿ ಆಗಿದೆ. ಇನ್ನೂ ಕಾರ್ ಮಾರಾಟ ಆಗಬೇಕಂತೆ.