Advertisement

ಬಾವಲಿ ಚೆಕ್‌ಪೋಸ್‌ನಲ್ಟಿ ಕಟ್ಟುನಿಟ್ಟಿ ನ ತಪಾಸಣೆ

09:23 PM Jan 07, 2022 | Team Udayavani |

ಎಚ್‌.ಡಿ.ಕೋಟೆ: ಕೊರೊನಾ ಸೋಂಕು ಹೆಚ್ಚಾಗುತ್ತಿ  ರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಕೇರಳ ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದೇ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್‌, ಈ ಬಾರಿ ವೀಕೆಂಡ್‌ ಕರ್ಫ್ಯೂ ಜಾರಿಯಾಗುವುದರಿಂದ ಚೆಕ್‌ಪೋಸ್ಟ್‌ ಮಾರ್ಗವಾಗಿ ಅನಗತ್ಯ ಸಂಚರಿಸುವ ವಾಹನಗಳ ಪ್ರವೇಶ ನಿರ್ಬಂಧಿಸಬೇಕು.

Advertisement

ಅಗತ್ಯ ಇರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡುವಂತೆ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಚೆಕ್‌ಪೋಸ್ಟ್‌ ಮಾರ್ಗವಾಗಿ ಆಗಮಿಸುತ್ತಿದ್ದ ವಾಹನ ಸವಾರರ ದಾಖಲಾತಿಗಳನ್ನು ಖದ್ದು ಪರಿಶೀಲಿಸಿದರು.

ಚೆಕ್‌ಪೋಸ್ಟ್‌ ಮಾರ್ಗವಾಗಿ ಆಗಮಿಸುವವರ ಬಳಿ 72 ತಾಸು ಮೀರಿರದ ಆರ್‌ ಟಿಪಿಸಿಆರ್‌ ನೆಗೆಟಿವ್‌ ವರದಿ ಇರಬೇಕು. ಕ್ಯೂಆರ್‌ ಬಾರ್‌ ಕೋಡಿಂಗ್‌ ತಪಾಸಣೆ, ಸ್ಥಳದಲ್ಲಿಯೇ ಥರ್ಮಲ್‌ ಸ್ಯಾನಿಂಗ್‌ ಸೇರಿದಂತೆ ತಪಾಸಣೆ ನಡೆಸಿ ಕೊರೊನಾ ಮಾರ್ಗಸೂಚಿ ಅನುಸರಿಸುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next