Advertisement

“ಗ್ರಾಮ ವಾಸ್ತವ್ಯದಿಂದ ಆಡಳಿತ ಚುರುಕು’ : ವೆಂಕಟೇಶ್‌ ನಾಯಕ್

10:44 PM Feb 20, 2021 | Team Udayavani |

ಬಳ್ಕುಂಜೆ: ಫೆಬ್ರವರಿಯಿಂದ ಪ್ರತೀ ತಿಂಗಳ 3ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಇದರಿಂದ ಸಹಜವಾಗಿ ಆಡಳಿತ ವ್ಯವಸ್ಥೆ ಚುರುಕುಗೊಳ್ಳುತ್ತದೆ. ಗ್ರಾಮ ವಾಸ್ತವ್ಯ ಎನ್ನುವುದು ಅಧಿಕಾರಿಗಳಿಗೆ ಹೊಸ ಅನುಭವ ಮತ್ತು ಬೆಳಗ್ಗೆಯಿಂದ ಸಂಜೆವರೆಗೆ ಜನರ ಜತೆಗಿದ್ದು ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಹಾಗೂ ಕೆಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದು ಮೂಲ್ಕಿ ತಹಶೀಲ್ದಾರ್‌ ವೆಂಕಟೇಶ್‌ ನಾಯಕ್‌ ಹೇಳಿದರು.

Advertisement

ಶನಿವಾರ ಬಳ್ಕುಂಜೆ ಗ್ರಾ.ಪಂ. ವಠಾರದಲ್ಲಿ ನಡೆದ ದ.ಕ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಮೂಲ್ಕಿ ತಾಲೂಕು ತಹಶೀಲ್ದಾರ್‌ ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ, ತೋಟಗಾರಿಕೆ, ಆರೋಗ್ಯ, ಆಹಾರ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ನೀಡಿದರು.

ಅರ್ಹ ಫಲಾನುಭವಿಗಳಿಗೆ ಈ ಸಂದರ್ಭ ಪಿಂಚಣಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭ ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷೆ ಮಮತಾ ಪೂಂಜಾ, ಉಪಾಧ್ಯಕ್ಷ ಆನಂದ, ಸರ್ವೇ ಸುಪರ್‌ವೈಸರ್‌ ರೂಪಕಲಾ ಶೆಟ್ಟಿ, ಮೂಲ್ಕಿ ಉಪ ತಹಶೀಲ್ದಾರ್‌ ಬಾಲಚಂದ್ರ, ಮೂಲ್ಕಿ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್‌ ಬಶೀರ್‌, ಸರ್ವೆಯರ್‌ ಮಧುಕರ್‌, ಕಂದಾಯ ನಿರೀಕ್ಷಕ ಸಂತೋಷ್‌, ಗ್ರಾಮ ಲೆಕ್ಕಿಗರಾದ ಸುಜಿತ್‌, ಸುನಿಲ್‌ ಕುಮಾರ್‌, ನಾಡ ಕಚೇರಿ ಸಿಬಂದಿ ಉಪಸ್ಥಿತರಿದ್ದರು.

ವಿವಿಧ ಸಮಸ್ಯೆಗಳಿಗೆ ಪರಿಹಾರ
ಪೌತಿ ಖಾತೆ ಬದಲಾವಣೆ, 94ಸಿಸಿ ಅರ್ಜಿ ವಿಲೇವಾರಿ, ಪೈಕಿ ಪಹಣಿ ಒಟ್ಟುಗೂಡಿಸುವುದು, ಕಲಂ 3 ಮತ್ತು 9 ಸರಿಪಡಿಸುವುದು, ಪಿಎಂ ಕಿಸಾನ್‌ ಯೋಜನೆ ದಾಖಲು, ಮಾಸಾಶನ, ಪಿಂಚಣಿ ಮಂಜೂರಾತಿ ಆದೇಶ ಸಮಸ್ಯೆಗಳ ಪರಿಹಾರ, ಭೂ ದಾಖಲೆಗಳ ಸಮಸ್ಯೆ ಪರಿಹಾರ, ಮತದಾರರ ಪಟ್ಟಿ ಸೇರ್ಪಡೆ ತಿದ್ದುಪಡಿ ಇತರ ಬಗೆಯ ಯೋಜನೆ ಬಗ್ಗೆ ತಿಳಿವಳಿಕೆ ಸಮಸ್ಯೆಗೆ ಸೂಕ್ತ ಪರಿಹಾರ ಈ ಸಂದರ್ಭ ನೀಡಲಾಗುವುದು ಎಂದು ತಹಶೀಲ್ದಾರ್‌ ವೆಂಕಟೇಶ್‌ ನಾಯಕ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next