Advertisement
ಮೆಟ್ಟಿನಡ್ಕ-ಕಂದ್ರಪ್ಪಾಡಿ ರಸ್ತೆ ವಿಸ್ತರಣೆ ಸಂದರ್ಭ ರಸ್ತೆಯ ಇಕ್ಕೆಲಗಳಿಗೆ ಮಣ್ಣು ತುಂಬಿಸಲು ಮೆಟ್ಟಿನಡ್ಕ ಶಾಲಾ ಬಳಿ ಗುಡ್ಡವನ್ನು ಜೆಸಿಬಿ ಮೂಲಕ ಅಗೆಯಲಾಗುತ್ತಿತ್ತು. ಕೆಲಸ ಮಾಡುತ್ತಿರುವಾಗ ಸುಮಾರು 15 ಅಡಿ ಅಗಲ ಹಾಗೂ 10 ಅಡಿಯಷ್ಟು ಆಳದ ಗುಹೆ ಕಂಡುಬಂದಿದ್ದು, ಸ್ಥಳೀಯರು ಹಾಗೂ ರಸ್ತೆ ಕೆಲಸಗಾರರು ಕಂಡು ವಿಸ್ಮಿತರಾಗಿದ್ದಾರೆ. ಇದನ್ನು ಕಂಡ ಅನಂತರ ಅಲ್ಲಿ ಮಣ್ಣು ಅಗೆಯುವ ಕಾರ್ಯವನ್ನು ಕೈಬಿಟ್ಟಿದ್ದು, ಸ್ಥಳೀಯರು ಸಹಿತ ಹಲವರು ಈ ಗುಹೆಯನ್ನು ನೋಡಲು ಸಾಗಿ ಬರುತ್ತಿದ್ದಾರೆ.
ಗುಹೆಯನ್ನು ನೋಡಿರುವ ಹಲವರು ಇದೊಂದು ನಿಧಿ ನಿಕ್ಷೇಪ ಇದ್ದ ಜಾಗವಾಗಿದ್ದು, ಇಲ್ಲಿ ಈ ಹಿಂದೆ ಕೊಪ್ಪರಿಗೆ ಇದ್ದಿರಬಹುದೆಂದು ಅಂದಾಜಿಸುತ್ತಿದ್ದಾರೆ. ಈ ಗುಹೆ ಕಂಡುಬಂದ ಜಾಗದ ಸಮೀಪವೇ ಭೂತ ಸ್ಥಾನವೊಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಪ್ರಶ್ನೆ ಚಿಂತನೆಯನ್ನೂ ಮಾಡಿದ್ದಾರೆ ಎಂದು ತಿಳಿದುಬಂದಿದೆ.