ನವದೆಹಲಿ: ಕೋವಿಡ್ 19 ವೈರಸ್ ಇದೀಗ ಹಲವಾರು ರೀತಿಯಲ್ಲಿ ಪತ್ತೆಹಚ್ಚಲಾಗದ ರೀತಿಯಲ್ಲಿ ಹರಡಲಿದೆ ಎಂಬುದು ಬಹಿರಂಗವಾಗಿದೆ. ಪ್ರಸ್ತುತ ಕೋವಿಡ್ 19 ವೈರಸ್ ಪೀಡಿತ ವ್ಯಕ್ತಿಯಲ್ಲಿ ಒಣ ಕೆಮ್ಮ, ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸುತ್ತಿದೆ. ಆದರೆ ಬಹುತೇಕರಿಗೆ ಇದೆ ಲಕ್ಷಣ ಕಾಣಿಸಿಕೊಳ್ಳೋದಿಲ್ಲ. ಯಾಕೆಂದರೆ ಕೋವಿಡ್ 19 ಮಹಾಮಾರಿ ಹಲವು ನಿಗೂಢ ರೀತಿಯಲ್ಲಿ ಮನುಷ್ಯನ ದೇಹದೊಳಗೆ ಸೇರಲಿದೆ ಎಂಬುದು ವರದಿ ತಿಳಿಸಿದೆ.
ಕೋವಿಡ್ 19 ವೈರಸ್ ಸದ್ದಿಲ್ಲದೇ ಮನುಷ್ಯನ ದೇಹದೊಳಗೆ ಪ್ರವೇಶಿಸಲಿದೆಯಂತೆ. ಚೀನಾದ 3/1ರಷ್ಟು ಕೋವಿಡ್ 19 ಪೀಡಿತರಿಗೆ ಸದ್ದಿಲ್ಲದೇ ದೇಹದೊಳಗೆ ಸೇರಿದ್ದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ ಎಂದು ಚೀನಾ ಮಾರ್ನಿಂಗ್ ಪೋಸ್ಟ್ ವರದಿ ವಿವರಿಸಿದೆ.
ಕೋವಿಡ್ 19 ಮಹಾಮಾರಿ ಮನುಷ್ಯನ ದೇಹದೊಳಗೆ ಹೇಗೆ ಸದ್ದಿಲ್ಲದೇ ಪ್ರವೇಶಿಸಲಿದೆ ಎಂಬುದು ಚೀನಾ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಒಣ ಕೆಮ್ಮ, ಉಸಿರಾಟದ ತೊಂದರೆ ಮಾತ್ರವಲ್ಲ ಇನ್ನೂ ಕೆಲವು ನಿಗೂಢ ಲಕ್ಷಣಗಳು ಇದ್ದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಕೋವಿಡ್ 19 ವೈರಸ್ ಗುಣಪಡಿಸುವ ಲಸಿಕೆ ಕಂಡು ಹಿಡಿಯುವ ಕೆಲಸ ಪರೀಕ್ಷಾ ಹಂತದಲ್ಲಿದೆ ಎಂದು ವರದಿ ವಿವರಿಸಿದೆ.