Advertisement

ಕನಡಕುಮೇರು-ಪಾದೆಬಂಬಿಲ: ರಸ್ತೆ ಸಂಚಾರ ದುಸ್ತರ

03:40 AM May 08, 2019 | mahesh |

ಸವಣೂರು: ಗ್ರಾಮೀಣ ಭಾಗದ ಮೂಲ ಅವಶ್ಯಕತೆಗಳು ಸ್ವಾತಂತ್ರ್ಯ ಸಿಕ್ಕಿ ಹಲವು ದಶಕಗಳೂ ಸಂದರೂ ಈಡೇರಿಲ್ಲ ಎನ್ನುವುದಕ್ಕೆ ಬೆಳಂದೂರು ಜಿ.ಪಂ. ವ್ಯಾಪ್ತಿಯ ಸವಣೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಕನಡಕುಮೇರು – ಪಾದೆಬಂಬಿಲ ರಸ್ತೆಯೇ ಸಾಕ್ಷಿ. ಈ ರಸ್ತೆ ಇದುವರೆಗೂ ಡಾಮರು ಕಂಡಿಲ್ಲ.

Advertisement

60ಕ್ಕೂ ಮಿಕ್ಕಿ ಜನವಸತಿ
ಈ ರಸ್ತೆಯನ್ನು ಬಳಸಿಕೊಂಡು 60ಕ್ಕೂ ಹೆಚ್ಚು ಜನವಸತಿಯವರು ಹೋಗುತ್ತಿದ್ದಾರೆ. ಒಂದು ಭಜನ ಮಂದಿರವೂ ಇದೆ. ಆದರೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ಮನದಟ್ಟಾಗಲೇ ಇಲ್ಲ. ಸುತ್ತಮುತ್ತಲಿನ ಹಲವೆಡೆ ರಸ್ತೆಗಳು ಅಭಿವೃದ್ಧಿಯಾದರೂ ಈ ರಸ್ತೆಯ ಸ್ಥಿತಿ ಬದಲಾಗಲೇ ಇಲ್ಲ. ಈ ರಸ್ತೆಯು ಅಂಗಡಿಮೂಲೆ, ಪಂಚೋಡಿ, ಕುಂಬಮೂಲೆ, ಬರೆಮೇಲು, ಜಾರಿಗೆತ್ತಡಿ,ಪಾದೆಬಂಬಿಲ ದುರ್ಗಾ ಭಜನ ಮಂದಿರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೂ ಈ ಭಾಗದ ಜನತೆಯ ಮೂಲ ಆವಶ್ಯಕತೆ ಈಡೇರಿಸಲು ಆಡಳಿತ ಸಂಪೂರ್ಣ ವಿಫಲವಾಗಿದೆ.

ಜನಪ್ರತಿನಿಧಿಗಳು ಗ‌ಮನಹರಿಸಲಿ
ಈ ರಸ್ತೆಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮೀಣ ಭಾಗದ ಬೇಡಿಕೆ ಈಡೇರಿಸಿದ್ದೇವೆ ಎಂದು ಜನಪ್ರತಿನಿಧಿಗಳು ಅಲ್ಲಲ್ಲಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಯಾಗಿಲ್ಲ ಎನ್ನುವುದಕ್ಕೆ ನಮ್ಮ ಈ ರಸ್ತೆಯೇ ಪ್ರತ್ಯಕ್ಷ ಸಾಕ್ಷಿ. ಇನ್ನಾದರೂ ಈ ಕುರಿತು ಜನಪ್ರತಿನಿಧಿಗಳು ಗಮನಹರಿಸಲಿ ಎನ್ನುತ್ತಾರೆ ಸ್ಥಳೀಯ ವಿದ್ಯಾರ್ಥಿನಿ ವೀಣಾಶ್ರೀ ಎ.ಎಲ್‌.

ಮನವಿ ಮಾಡಿದ್ದೇವೆ
ಈ ರಸ್ತೆ ಸಮಸ್ಯೆ ಕುರಿತು ಖುದ್ದಾಗಿ ಶಾಸಕ ಎಸ್‌. ಅಂಗಾರ ಅವರಿಗೆ, ಜಿ.ಪಂ. ಸದಸ್ಯರಿಗೂ ಮನವಿ ಮಾಡಿದ್ದೇವೆ. ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಭರವಸೆ ನೀಡಿದ್ದಾರೆ
– ಸತೀಶ್‌ ಅಂಗಡಿಮೂಲೆ ಸದಸ್ಯರು, ಸವಣೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next