Advertisement

ದಕ್ಷಿಣ ಕೋಲ್ಕತ್ತಾದ ಎಸ್ಕೇ ಮೂವೀಸ್ ಸ್ಟುಡಿಯೋದಲ್ಲಿ ಬೆಂಕಿ ಅವಘಡ

10:19 AM Oct 13, 2022 | Team Udayavani |

ಕೊಲ್ಕತ್ತಾ : ದಕ್ಷಿಣ ಕೋಲ್ಕತ್ತಾದ ಕುದ್ಘಾಟ್ ಪ್ರದೇಶದಲ್ಲಿರುವ ಎಸ್ಕೇ ಮೂವೀಸ್ ಸ್ಟುಡಿಯೋದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

Advertisement

ಘಟನಾ ಸ್ಥಳಕ್ಕೆ 15 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದಾರೆ, ಸದ್ಯ ಬೆಂಕಿ ಹತೋಟಿಗೆ ಬಂದಿದೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಪಾಕ್: ಬಸ್ ಗೆ ಬೆಂಕಿ- 20 ಮಂದಿ ಪ್ರವಾಹ ಸಂತ್ರಸ್ತರು ಸಜೀವ ದಹನ, ಹಲವು ಜನರಿಗೆ ಗಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next