Advertisement

ಅಡಿಕೆ ಕೊಳೆ ರೋಗಕ್ಕೆ ಸರಕಾರದಿಂದ ಉಚಿತ ಔಷಧಿಗೆ ಚಿಂತನೆ : ಸಚಿವ ಎಸ್.ಅಂಗಾರ

07:23 PM Oct 01, 2022 | Team Udayavani |

ಸುಳ್ಯ: ಇತ್ತೀಚೆಗೆ ತೋಟಗಾರಿಕಾ ಸಚಿವ ಮುನಿರತ್ನ, ಗೃಹ ಸಚಿವ ಆರಗ ಹಾಗೂ ನಾನು ಬೆಂಗಳೂರಿನಲ್ಲಿ ಸಭೆ ನಡೆಸಿ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗಕ್ಕೆ ಸಿಂಪಡಿಸುವ ಔಷಧಿಯನ್ನು ಕೃಷಿಕರಿಗೆ ಉಚಿತವಾಗಿ ನೀಡುವ ಬಗ್ಗೆ ತೀರ್ಮಾನವನ್ನು ರಾಜ್ಯ ಸರಕಾರ ಮಾಡಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದರು.

Advertisement

ಅವರು ಶನಿವಾರ ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಔಷಧಿ ಸಿಂಪಡಿಸಲು ಸರಕಾರ ಸಬ್ಸಿಡಿ ದರದಲ್ಲಿ ದೋಟಿಯನ್ನು ನೀಡುವ ಬಗ್ಗೆ ತೀರ್ಮಾನಿಸಿದೆ, 18 ದಿನಗಳೊಳಗಡೆ ಸುಳ್ಯಕ್ಕೆ ಆರಗ ಜ್ಞಾನೇಂದ್ರ, ತೋಟಗಾರಿಕಾ ಸಚಿವರು ಬಂದು ಇಲ್ಲಿ ಅಡಿಕೆ ಹಳದಿ ರೋಗದ ರೈತರ ಅಭಿಪ್ರಾಯ ಪಡೆದು ಮುಂದೆ ಏನು ಮಾಡಬೇಕು ಎಂಬ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಅವರು ತಿಳಿಸಿದರು.

ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ರಬ್ಬರ್ ಮಂಡಳಿ ನಿರ್ದೇಶಕ ಮುಳಿಯ ಕೇಶವ ಭಟ್, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಚನಿಯ ಕಲ್ತಡ್ಕ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಸುಭೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

Advertisement

Udayavani is now on Telegram. Click here to join our channel and stay updated with the latest news.

Next