Home

ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು

Home Stories
ಹದಿನಾಲ್ಕನೇ ಐಪಿಎಲ್‌ ಹಣಾಹಣಿಗೆ ರೋಚಕ ಆರಂಭ ಲಭಿಸಿದೆ. ಹರ್ಷಲ್‌ ಪಟೇಲ್‌ ಮತ್ತು ಎಬಿ ಡಿ ವಿಲಿಯರ್ ಅವರ ದಿಟ್ಟ ಹೋರಾಟದ ಫಲದಿಂದ ಆರ್‌ಸಿಬಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 2 ವಿಕೆಟ್‌ ಅಂತರದ ರೋಚಕ ಜಯ ದಾಖಲಿಸಿದೆ.
Home Stories
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ 9 ವಿಕೆಟಿಗೆ 159 ರನ್‌ ಗಳಿಸಿದರೆ, ಆರ್‌ಸಿಬಿ ಡೆತ್‌ ಓವರ್‌ಗಳ ಒತ್ತಡವನ್ನು ಮೆಟ್ಟಿನಿಂತು ಅಂತಿಮ ಎಸೆತದಲ್ಲಿ ಗುರಿ ಮುಟ್ಟಿತು.
Home Stories
ಚೇಸಿಂಗ್‌ ವೇಳೆ ಆರ್‌ಸಿಬಿ ಆಗಾಗ ಒತ್ತಡಕ್ಕೆ ಸಿಲುಕಿದರೂ ಕೊಹ್ಲಿ, ಮ್ಯಾಕ್ಸ್‌ವೆಲ್‌ ಮತ್ತು ಎಬಿಡಿ ಮುಂಬೈಗೆ ಸವಾಲಾಗಿ ಪರಿಣಮಿಸಿದರು. ಕೊನೆಯ 5 ಓವರ್‌ಗಳಲ್ಲಿ 54 ರನ್‌ ತೆಗೆಯುವ ಸವಾಲು ಎದುರಾದಾಗ ಎಬಿಡಿ ಸಿಡಿದು ನಿಂತರು. ಆದರೆ ಗೆಲುವಿನ ಗಡಿಯಲ್ಲಿ ರನೌಟಾಗಿ ನಿರ್ಗಮಿಸಿದರು. 27 ಎಸೆತಗಳಿಂದ 48 ರನ್‌ ಬಾರಿಸಿದ ಎಬಿಡಿ ಆರ್‌ಸಿಬಿ ಸರದಿಯ ಟಾಪ್‌ ಸ್ಕೋರರ್‌ ಆಗಿ ಮೂಡಿಬಂದರು (4 ಬೌಂಡರಿ, 2 ಸಿಕ್ಸರ್‌).
Home Stories
ಪವರ್‌ ಪ್ಲೇ ಮತ್ತು ಡೆತ್‌ ಓವರ್‌ಗಳಲ್ಲಿ ಕೊಹ್ಲಿ ಪಡೆ ಬಿಗಿಯಾದ ಬೌಲಿಂಗ್‌ ನಡೆಸಿ ಗಮನ ಸೆಳೆಯಿತು. ಮಧ್ಯಮ ವೇಗಿ ಹರ್ಷಲ್‌ ಪಟೇಲ್‌ 27 ರನ್ನಿಗೆ 5 ವಿಕೆಟ್‌ ಹಾರಿಸಿದರು. ಇದರಲ್ಲಿ 3 ವಿಕೆಟ್‌ಗಳನ್ನು ಅವರು ಕೊನೆಯ ಓವರ್‌ನಲ್ಲಿ, 4 ಎಸೆತಗಳ ಅಂತರದಲ್ಲಿ ಹಾರಿಸಿದರು.
Home Stories
ರೋಹಿತ್‌ ಶರ್ಮ ಹಾಗೂ ಇದೇ ಮೊದಲ ಸಲ ಮುಂಬೈ ತಂಡವನ್ನು ಪ್ರತಿನಿಧಿಸಿದ ಆಸ್ಟ್ರೇಲಿಯದ ಕ್ರಿಸ್‌ ಲಿನ್‌ ನಿರೀಕ್ಷಿತ ಆರಂಭ ನೀಡಲು ವಿಫ‌ಲರಾದರು. 4 ಓವರ್‌ಗಳಿಂದ ಕೇವಲ 24 ರನ್‌ ಒಟ್ಟುಗೂಡಿಸಿದರು. ಆಗ ಲಿನ್‌ ಜತೆ ಮಿಕ್ಸಪ್‌ ಮಾಡಿಕೊಂಡ ರೋಹಿತ್‌ ರನೌಟಾದರು. ಮುಂಬೈ ಕಪ್ತಾನನ ಗಳಿಕೆ 19 ರನ್‌ (15 ಎಸೆತ, 1 ಬೌಂಡರಿ, 1 ಸಿಕ್ಸರ್‌). ಇದರೊಂದಿಗೆ ರೋಹಿತ್‌ ಶರ್ಮ ಐಪಿಎಲ್‌ನಲ್ಲಿ 11 ಸಲ ರನೌಟ್‌ ಆದಂತಾಯಿತು. ಜತೆಗೆ ಅತ್ಯಧಿಕ 36 ರನೌಟ್‌ಗಳಲ್ಲಿ ಕಾಣಿಸಿಕೊಂಡರು.
Home Stories
ವನ್‌ಡೌನ್‌ನಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಆಕ್ರಮಣಕಾರಿ ಆಟದ ಸೂಚನೆಯಿತ್ತರು. ಪವರ್‌ ಪ್ಲೇ ಅವಧಿಯಲ್ಲಿ ಮುಂಬೈ ಒಂದು ವಿಕೆಟಿಗೆ 41 ರನ್‌ ಮಾಡಿತು.