Home

ಪುನುಗು ಬೆಕ್ಕಿನ ವಿಶೇಷತೆ

Home Stories
ಪುನುಗು ಬೆಕ್ಕು ಕಾರ್ನಿವೊರ ಗಣದ ಮಾಂಸಾಹಾರಿ ಸ್ತನಿ. ಇದು ವೈವರಿಡೀ ಕುಟುಂಬಕ್ಕೆ ಸೇರಿದೆ. ಇವುಗಳ ಪ್ರಜನನಾಂಗಗಳ ಬಳಿ ಸುಗಂಧ ವಸ್ತು ಸ್ರವಿಸುವ ಗ್ರಂಥಿಗಳಿವೆ. ಈ ವಸ್ತು ಪುನುಗು ಅಥವಾ ಗುದದ್ವಾರದ ಬಳಿ ಇರುವ ಸಂಚಿಯೊಂದಕ್ಕೆ ಸುರಿದು ಸಂಗ್ರಹಗೊಳ್ಳುತ್ತದೆ. ಈ ಸುಗಂಧ ವಸ್ತುವಿನೊಂದಿಗೆ ಸಮಪ್ರಮಾಣದಲ್ಲಿ ನೀರು ಬೆರೆಸಿ ಇತರ ಸುಗಂಧಗಳೊಡನೆ ಸೇರಿಸಿದಾಗ ಸುವಾಸನೆಯನ್ನು ಕೊಡುತ್ತದೆ
Home Stories
ಆಫ್ರಿಕ, ಬರ್ಮ, ಶ್ರೀಲಂಕಾ, ಮಲೇಷಿಯಾಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ಭಾರತದಲ್ಲಿ ಕಾಣ ಸಿಗುವ ಪುನುಗು ಬೆಕ್ಕಿಗೆ ವೈವರಿಕ್ಯುಲ ಇಂಡಿಕ ಎಂದು ಕರೆಯುತ್ತಾರೆ. ಇವುಗಳಿಗೆ ದೇಹದ ಎರಡೂ ಕಡೆ ಉದ್ದುದ್ದನೆಯ ಪಟ್ಟೆಗಳಿವೆ. ಇದು ಹೆಚ್ಚು ಕಡಿಮೆ ಭಾರತಾದ್ಯಂತ ಕಾಣದೊರೆಯುತ್ತದೆ. ಪಶ್ಚಿಮ ಘಟ್ಟಗಳಲ್ಲೂ ಪುನುಗು ಬೆಕ್ಕು ಕಾಣ ಸಿಗುತ್ತದೆ.
Home Stories
ಭಾರತದ ಪುನುಗು ಬೆಕ್ಕು ವೈವರ ಜಿಬೆತ ಸುಮಾರು 80 ಸೆಂ.ಮೀ. ಉದ್ದವಿರುತ್ತದೆ. ಸುಮಾರು 7-11ಕೆಜಿ ತೂಕವಿರುತ್ತವೆ. ಉದ್ದ ಮೂತಿ, ಮೋಟು ಕಾಲುಗಳು, ಕಪ್ಪು ಮಿಶ್ರಿತ ಬೂದು ಬಣ್ಣ, ಬೆನ್ನಿನ ಉದ್ದಕ್ಕೂ ಕತ್ತಿನಿಂದ ಬಾಲದವರೆಗೂ ಹಬ್ಬಿರುವ ಕಪ್ಪು ಕೂದಲಿನ ಏಣು, ಎದೆ ಹಾಗೂ ಭುಜಗಳ ಮೇಲಿನ ಕಪ್ಪು ಪಟ್ಟೆಗಳನ್ನು ಹೊಂದಿರುತ್ತವೆ. ಇದರ ಬಾಲ ಸುಮಾರು 45 ಸೆಂ.ಮೀ. ಉದ್ದವಿರುತ್ತವೆ.
Home Stories
ಎಲ್ಲ ಪ್ರಭೇದಗಳ ಪುನುಗು ಬೆಕ್ಕನ್ನು ಸಾಕಬಹುದಾಗಿದ್ದು ಅವುಗಳಿಂದ ತಿಂಗಳಿಗೊಮ್ಮೆ ಇಲ್ಲವೇ ವಾರಕ್ಕೊಮ್ಮೆ ಪುನುಗನ್ನು ಪಡೆಯುತ್ತಾರೆ. ಪುನುಗು ಬೆಕ್ಕನ್ನು ಸಣ್ಣ ಪಂಜರಗಳಲ್ಲಿಟ್ಟು ಕೊಂಬಿನ ಚಮಚೆಗಳಿಂದ ಪುನುಗನ್ನು ಬಗೆದು ತೆಗೆಯುತ್ತಾರೆ. ಇವನ್ನು ಪೀಡಿಸಿ ರೊಚ್ಚಿಗೆಬ್ಬಿಸಿದರೆ ಹೆಚ್ಚು ಪುನುಗು ಒಸರುತ್ತದೆ. ಒಂದು ಬೆಕ್ಕಿನಿಂದ ವಾರಕ್ಕೆ 30ಗ್ರಾಮ್ ಪುನುಗನ್ನು ಪಡೆಯಬಹುದು. ಬೆಕ್ಕಿನಿಂದ ಪಡೆದ ಪುನುಗನ್ನು ಸುವಾಸನೆ ಭರಿಸುವ ವಸ್ತುವಾಗಿ ಸುಗಂಧ ದ್ರವ್ಯಗಳಲ್ಲಿ ಬಳಸುತ್ತಾರೆ.ಪುನುಗನ್ನು ಕಾಫಿ ತಯಾರಿಕೆಯಲ್ಲಿ ಬಳಸುತ್ತಾರೆ
Home Stories
ಪುನುಗು ಬೆಕ್ಕಿನ ಸಂತಾನೋತ್ಪತ್ತಿಯ ಕಾಲ ಮೇ-ಜೂನ್ ತಿಂಗಳು. ಇವು ಒಂದು ಸಲಕ್ಕೆ 3-4 ಮರಿಗಳನ್ನಿಡುತ್ತವೆ. ದಟ್ಟ ಪೊದೆಗಳಲ್ಲಿ ಅಥವಾ ಬಿಲಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.