Advertisement

ಗೋವಾ: ತಾಂತ್ರಿಕ ಸಮಸ್ಯೆಯಿಂದಾಗಿ ಜುವಾರಿ ಸೇತುವೆ ಉದ್ಘಾಟನೆ ಮುಂದೂಡಿಕೆ

06:41 PM Nov 17, 2021 | Team Udayavani |

ಪಣಜಿ: ನಿರೀಕ್ಷೆಯಂತೆ ಹೊಸ ಜುವಾರಿ ಸೇತುವೆ ಉದ್ಘಾಟನೆಯು ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಗಲಿದೆ ಎಂದು ರಾಜ್ಯ ಲೊಕೋಪಯೋಗಿ ಸಚಿವ ದೀಪಕ್ ಪಾವುಸ್ಕರ್ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು -ಸರ್ಕಾರವು ಡಿಸೆಂಬರ್ 19 ರ ಒಳಗೆ ಜುವಾರಿ ಸೇತುವೆಯ ಒಂದು ಪಥವನ್ನು ಉದ್ಘಾಟಿಸಲು ಯೋಜಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದದಾಗಿ ಉದ್ಘಾಟನೆಯನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದರು.

ಜುವಾರಿ ಹೊಸ ಸೇತುವೆಯನ್ನು ಮೂರು ಪ್ಯಾಕೇಜ್‍ಗಳಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಪ್ರತಿ ತಿಂಗಳು ಈ ಕಾಮಗಾರಿಗಳ ಪರಿಶೀಲನೆಗೆ ಇಲಾಖೆ ಸಭೆ ನಡೆಸುತ್ತದೆ ಎಂದು ದೀಪಕ್ ಪಾವುಸ್ಕರ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next