Advertisement

ಹೋರಾಟ ಕೈಬಿಡಿ; ಮತದಾನಕ್ಕೆ ಸಹಕರಿಸಿ

03:24 PM Mar 24, 2019 | Team Udayavani |

ಚಿಕ್ಕೋಡಿ: ಜಿಲ್ಲಾ ಹೋರಾಟ ಸಮಿತಿಯು ಮತದಾನ ಬಹಿಷ್ಕಾರ ಆಂದೋಲನ ಕೈಬಿಟ್ಟು ಪೂರ್ಣ ಪ್ರಮಾಣದ ಮತದಾನ ನಡೆಯಲು ಕೈ ಜೋಡಿಸಬೇಕೆಂದು ಚಿಕ್ಕೋಡಿ ಲೋಕಸಭೆ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಸಿಇಒ ರಾಜೇಂದ್ರ ಹೇಳಿದರು.

Advertisement

ಇಲ್ಲಿನ ಮಿನಿವಿಧಾನಸೌಧ ಸಭಾ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಹೋರಾಟ ಸಮಿತಿ ಮುಖಂಡರ ಸಭೆ ನಡೆಸಿದ ಅವರು, ಚಿಕ್ಕೋಡಿ ಜಿಲ್ಲೆ ಘೋಷಣೆ ಕುರಿತು ರಾಜ್ಯ ಚುನಾವಣಾಧಿ ಕಾರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಲಾಗುತ್ತದೆ ಎಂದು ಮನವರಿಕೆ ಮಾಡಿದರು.

ಲೋಕಸಭೆ ಚುನಾವಣೆಯು ಐದು ವರ್ಷಕ್ಕೊಮ್ಮೆ ಬರುವ ದೇಶದ ಒಂದು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ. ಮತದಾನ ಮಾಡಬೇಡಿ ಎಂದು ಹೇಳುವುದು ಕಾನೂನಾತ್ಮಕ ಅಪರಾಧವಾಗುತ್ತದೆ ಎಂದರು.

ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಸ್ವ ಇಚ್ಛೆಯಿಂದ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬೇಕು ವಿನಾ ಬೇರೆ ವ್ಯಕ್ತಿಗೆ ಮತದಾನ ಮಾಡಬಾರದೆಂದು ಹೇಳುವುದು ಸಮಂಜಸವಲ್ಲ, ಹೋರಾಟ ಸಮಿತಿ ಸದಸ್ಯರು ನಡೆಸಿರುವ ಅಭಿಯಾನ ಮೊಟಕುಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಚಿಕ್ಕೋಡಿ ಜಿಲ್ಲೆಯಾಗಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ದೇಶದ 25 ನೆಯ ದೊಡ್ಡ ಜಿಲ್ಲೆ ಬೆಳಗಾವಿ. ರಾಜ್ಯದಲ್ಲಿ ಬೆಂಗಳೂರು ಕೇಂದ್ರ ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯ ಅತೀ ದೊಡ್ಡ ಜಿಲ್ಲೆಯಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಿದರೆ ಅನುಕೂಲವಾಗುತ್ತದೆ. ಆದರೆ ಜಿಲ್ಲೆ ಘೋಷಣೆ ವಿಷಯ ಸರ್ಕಾರದ ಮಟ್ಟದಲ್ಲಿ ಆಗುವುದರಿಂದ ನಿಮ್ಮ ಬೇಡಿಕೆ ಈಡೇರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ, ಹೋರಾಟಗಾರರ ಬೇಡಿಕೆಯನ್ನು ರಾಜ್ಯ ಚುನಾವಣಾ ಧಿಕಾರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗುತ್ತದೆ ಎಂದರು.

Advertisement

ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್‌.ಸಂಗಪ್ಪಗೋಳ ಮಾತನಾಡಿ, ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ನಾವು ಮತದಾನ ಮಾಡಬೇಡಿ ಎಂದು ಹೇಳುತ್ತೇವೆ. ನಮ್ಮ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಬಹುದು ಎಂದರು. ಆದರೆ ನಮ್ಮ ಸಮಸ್ಯೆ ಬಗೆಹರಿಸುತ್ತೇವೆಂದು ಮೇಲಧಿ ಕಾರಿಗಳ ಜೊತೆ ಮಾತುಕತೆ ನಡೆಸಿ ಮತ್ತೊಮ್ಮೆ ನಮ್ಮ ಸಭೆ ಕರೆಯಬೇಕು ಎಂದು ಮನವಿ ಮಾಡಿದರು.

ಸಾಹಿತಿ ಪ್ರೊ|ಎಸ್‌.ವೈ. ಹಂಜಿ ಮಾತನಾಡಿ, ಚಿಕ್ಕೋಡಿ 25 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡ ಜಿಲ್ಲೆ . ಇದನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವುದು ಅವಶ್ಯಕ ಎಂದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರಾದ ತುಕಾರಾಮ ಕೋಳಿ, ಬಸವರಾಜ ಢಾಕೆ, ರೇವಪ್ಪ ತಳವಾರ, ಸಂಜು ಬಡಿಗೇರ, ಸಿದ್ದು ಪಾಟೀಲ, ಅರ್ಜುನ ಚೆನ್ನವರ, ಸುಭಾಷ ಬಸರಗಿ, ಭೀಮರಾವ ಚೌಗಲೆ, ವಾಸುದೇವ ಯಕಣೆ, ಬಾಳಪ್ಪ ವಾಲಿಕಾರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next