Advertisement

ಹೊಸ ಫೋನ್‌ ಕಳೆದುಕೊಂಡ ಕೊಹ್ಲಿಗೆ ಝೊಮ್ಯಾಟೋ ನೀಡಿದ ಉಪಾಯ ಫುಲ್‌ ವೈರಲ್‌

06:58 PM Feb 07, 2023 | Team Udayavani |

ತಮ್ಮ ಹೊಸ ಫೋನ್‌ ಕಳೆದುಕೊಂಡ ಬಗ್ಗೆ ವಿರಾಟ್‌ ಕೊಹ್ಲಿ  ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫೆ.7ರಂದು ಅನ್‌ ಬಾಕ್ಸ್‌ ಮಾಡುವ ಮುನ್ನವೇ ನನ್ನ ಪೋನ್‌ ಕಳೆದುಹೋಗಿದೆ ಎಂದು ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ʻಹೊಸದಾಗಿ ಕೊಂಡುಕೊಂಡ ಫೋನೊಂದು ಅನ್‌ಬಾಕ್ಸ್‌ ಮಾಡುವುದಕ್ಕೂ ಮೊದಲೇ ಕಳೆದುಹೋದ್ರೆ ಆಗುವ ನೋವನ್ನು ಯಾವುದೂ ಮೀರಿಸುವುದಿಲ್ಲ. ಯಾರಾದ್ರೂ ನನ್ನ ಫೋನನ್ನು ನೋಡಿದ್ದೀರಾ?ʼ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

Advertisement

ಆದರೆ ಕೊಹ್ಲಿ ಅವರ ಈ ಬೇಸರದ ಸಮಯದಲ್ಲಿ ಝೊಮ್ಯಾಟೋ ಸಂಸ್ಥೆ ಅವರಿಗೆ ಒಂದು ಒಳ್ಳೇ ಉಪಾಯ ಹೇಳಿದೆ. ಅದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಬೇಸರ ಕಳೆದುಕೊಳ್ಳಲು ಪರಿಹಾರವನ್ನು ಸೂಚಿಸಿದ ಝೊಮ್ಯಾಟೋ `ಪತ್ನಿ ಅನುಷ್ಕಾ ಶರ್ಮಾ ಅವರಲ್ಲಿ ಹೇಳಿ ಅವರ ಫೋನ್‌ನಿಂದ ಕೆಲವು ಐಸ್‌ಕ್ರೀಮ್‌ಗಳನ್ನು ಆರ್ಡರ್‌ ಮಾಡಿಸಿಕೊಳ್ಳಿ. ಅದು ನಿಮಗೆ ಸಂತೋಷ ತರಿಸುತ್ತದೆʼ ಎಂದು ಹೇಳಿದೆ,

ಎಂದಿನಂತೆ ಝೊಮ್ಯಾಟೋದ ಈ ಕಾಲೆಳೆಯುವ ಕಮೆಂಟ್‌ ಫುಲ್‌ ವೈರಲ್‌ ಆಗಿದ್ದು ಅದರ ಕಮೆಂಟ್‌ನ್ನು ಕೆಲ ನೆಟ್ಟಿಗರು ಪ್ರಶಂಸಿಸಿದ್ದಾರೆ. ಕೆಲವರು ʻಅನುಷ್ಕಾ ಏನಾದ್ರೂ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿದ್ರೆ ಏನ್‌ ಮಾಡೋದು?ʼ ಅಂತ ಕೇಳಿದ್ರೆ ಮತ್ತೆ ಕೆಲವರು ಝೊಮ್ಯಾಟೋದ ಮಾರ್ಕೆಟಿಂಗ್‌ ಐಡಿಯಾಗೆ ತಲೆಬಾಗಿದ್ದಾರೆ..!

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next