ಮುಂಬೈ: ಜನಪ್ರಿಯ ಆನ್ ಲೈನ್ ಆಹಾರ ವಿತರಣಾ App ಜೊಮ್ಯಾಟೊ ಇದೀಗ ತನ್ನದೇ ಸ್ವಂತ ಯುಪಿಐ (UPI-ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್) ಸೇವೆಯನ್ನು ಆರಂಭಿಸಿದೆ. ಜೊಮ್ಯಾಟೊ ಐಸಿಐಸಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ರಿಯಲ್ ಟೈಮ್ ಪಾವತಿಗೆ ಅನುಕೂಲವಾಗುವಂತೆ ಆರಂಭಿಸಿರುವ ಯುಪಿಐ ಮೂಲಕ ಜೊಮ್ಯಾಟೊ ಬಳಕೆದಾರರು ನೇರವಾಗಿ ವ್ಯಾಪಾರಿಗಳಿಗೆ ಪಾವತಿ ಮಾಡಲು ಅನುವು ಮಾಡಿಕೊಡಲಿದೆ.
ಇದನ್ನೂ ಓದಿ:Indore: ಮೂರನೇ ಪತ್ನಿಯ ಸಂತೋಷಕ್ಕಾಗಿ ತನ್ನ 7 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದ ತಂದೆ
ಜೊಮ್ಯಾಟೊ ಯುಪಿಐನಿಂದಾಗಿ ಬಳಕೆದಾರರು ಫುಡ್ ಡೆಲಿವರಿಗಳಲ್ಲಿ ನೇರವಾಗಿ ಹಣವನ್ನು ಪಾವತಿಸಬಹುದಾಗಿದೆ. ಹಾಗೂ ಇತರ ಬಳಕೆದಾರರಿಗೂ ಹಣವನ್ನು ಕಳುಹಿಸಲು ಅನುಕೂಲವಾಗಲಿದೆ. ಜೊಮ್ಯಾಟೊ App ಬಳಸುವ ಗ್ರಾಹಕರು ಅಪ್ಲಿಕೇಶ್ ಸೈನ್ ಇನ್ ಮಾಡಿ ತಮ್ಮದೇ UPI ಐಡಿಗಳನ್ನು ರಚಿಸಿದ ನಂತರ ಅಪ್ಲಿಕೇಶನ್ ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಜೊಮ್ಯಾಟೋ UPI ಕ್ರಿಯೇಟ್ ಮಾಡಲು ಹೀಗೆ ಮಾಡಿ…
Related Articles
*ಜೊಮ್ಯಾಟೋ App ಡೌನ್ ಲೋಡ್ ಮಾಡಿ, ಅದನ್ನು ಓಪನ್ ಮಾಡಿ.
*ನಂತರ ಜೊಮ್ಯಾಟೋ ಅಕೌಂಟ್ ನಲ್ಲಿರುವ ಪ್ರೊಫೈಲ್ ಸೆಕ್ಷನ್ ಕ್ಲಿಕ್ ಮಾಡಿ.
*ಬಳಿಕ ಜೊಮ್ಯಾಟೋ UPI ಆಯ್ಕೆಗಾಗಿ ಸ್ಕ್ರೋಲ್ ಡೌನ್ ಮಾಡಿ.
*ಜೊಮ್ಯಾಟೊ ಯುಪಿಐ Activate ಅನ್ನು ಕ್ಲಿಕ್ ಮಾಡಿ.
*ನಿಮ್ಮ ಆಯ್ಕೆಯ ಜೊಮ್ಯಾಟೊ ಯುಪಿಐ ಐಡಿಯನ್ನು ರಚಿಸಿ.
*ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ.
*ನಂತರ ಜೊಮ್ಯಾಟೊ ಅಪ್ಲಿಕೇಶನ್ ಮೂಲಕ ಸುಲಭ ಪಾವತಿ ಸಕ್ರಿಯಗೊಳಿಸಲು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ.
ಈ ಕ್ರಮಗಳನ್ನು ಅನುಸರಿಸಿದ ಬಳಿಕ ಜೊಮ್ಯಾಟೊ ಯುಪಿಐ Activate ಆಗುವ ಮೂಲಕ ನೀವು ಆರ್ಡರ್ ಮಾಡುವ ಊಟೋಪಚಾರಕ್ಕೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ.