ಹೊಸದಿಲ್ಲಿ : ರ್ಯಾನ್ಸಮ್‌ವೇರ್ ವೈರಸ್ ದಾಳಿ ಜಗತ್ತಿನಾದ್ಯಂತ ಉದ್ಯಮಗಳ,ಜನರ ನಿದ್ದೆಗೆಡಿಸಿರುವ ವೇಳೆಯಲ್ಲೇ ಆನ್‌ಲೈನ್ ರೆಸ್ಟೋರೆಂಟ್ ಗೈಡ್ ಮತ್ತು ಪುಡ್ ಆರ್ಡರ್ ಆ್ಯಪ್ ಝೊಮಾಟೊವನ್ನೂ ಹ್ಯಾಕ್ ಮಾಡಲಾಗಿದೆ.
ವಿಶ್ವದ ಅತೀ ಹೆಚ್ಚು ಜನರು ಲಾಗ್ ಆಗುವ ಝೊಮಾಟೊಗೆ ಹ್ಯಾಕರ್ಸ್‌ಗಳು ಕನ್ನ ಹಾಕಿದ್ದು 1ಕೋಟಿ 70 ಲಕ್ಷ ಖಾತೆದಾರರ ಮಾಹಿತಿಗಳನ್ನು ಕದ್ದಿದೆ.
ನಮ್ಮ ಡೇಟಾಬೇಸ್‌ನಿಂದ ಸುಮಾರು 17 ದಶಲಕ್ಷ ಬಳಕೆದಾರ ದಾಖಲೆಗಳನ್ನು ಕದ್ದಿರುವುದನ್ನು ನಮ್ಮ ಭದ್ರತಾ ತಂಡವು ಪತ್ತೆಹಚ್ಚಿರುವುದಾಗಿ ಝೊಮಾಟೊ ಪ್ರಕಟಿಸಿದೆ. ಝೊಮೆಟೊ ಆ್ಯಪ್ ಬಳಕೆದಾರರ ಇ ಮೇಲ್ ವಿಳಾಸ ಮತ್ತು ಪಾಸ್‌ವರ್ಡ್‌ಗಳು ಹ್ಯಾಕರ್ಸ್‌ಗಳ ವಶವಾಗಿದೆ.
ನೀವು ಎಲ್ಲಾ ಕಡೆಗಳಲ್ಲೂ ಒಂದೇ ಪಾಸ್‌ವರ್ಡ್ ಬಳಸುತ್ತಿದ್ದರೆ ದಯವಿಟ್ಟು ಭದ್ರತಾ ದೃಷ್ಟಿಯಿಂದ ಬದಲಾಯಿಸಿಕೊಳ್ಳಿ ಎಂದು ಬಳಕೆದಾರರಲ್ಲಿ ಮನವಿ ಮಾಡಿದೆ.
ಆದರೆ ಯಾವುದೇ ಹಣಕಾಸಿನ ಮಾಹಿತಿಯನ್ನು ಕದಿಯಲು ಸಾಧ್ಯವಾಗಿಲ್ಲ. ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಪಿಸಿಐ ಡಾಟಾ ಆಗಿರುವ ಡಾಟಾ ಸ್ಯೆಕುರಿಟಿ ಸ್ಟಾಂಡರ್ಡ್ ಮೂಲಕ ಸುರಕ್ಷಿತವಾಗಿರಿಸಲಾಗಿದೆ ಎಂದು ಝೊಮಾಟೊ ತಿಳಿಸಿದೆ.